ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ದಾಳಿ: ಅಪರೂಪಕ್ಕೆ ಶಿಕ್ಷೆಗೂ ಗುರಿ

By Srinath
|
Google Oneindia Kannada News

mysore-sub-registrar-ks-mahadevaiah-fined-ri
ಮೈಸೂರು, ಏ.13: ಲೋಕಾಯುಕ್ತ ದಾಳಿ ಅಂದರೆ ಜನರಿಗೆ ಒಂದು ರೀತಿ ಕ್ಲೀಷೆ ಅನ್ನಿಸುವಂತಾಗಿದೆ. ದಾಳಿ ಮಾಡ್ತಾರೆ. ದಾಳಿಗೊಳಾಗದ ನೌಕರ ಜಾಮೀನು ಮೇಲೆ ಆರಾಮಾಗಿ ಓಡಾಡಿಕೊಂಡಿರುತ್ತಾರೆ. ಕೊನೆಗೆ ಆತನಿಗೆ ಶಿಕ್ಷೆ ಆಯಿತೋ ಇಲ್ವೋ ಅದೂ ತಿಳಿಯೊಲ್ಲ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯೂ ಆಗುವುದಿಲ್ಲ. ಅಷ್ಟರಮಟ್ಟಿಗೆ ಅವರು ಬಚಾವ್. ಎಂಬೆಲ್ಲ ಮಾತುಗಳು ಜನಮಾನಸದಲ್ಲಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಅಪರೂಪಕ್ಕೆ ಶಿಕ್ಷೆಯೂ ಪ್ರಕಟವಾಗಿ, ಪೊಲೀಸರು ತಕ್ಷಣ ಆ ಅಧಿಕಾರಿಯನ್ನು ವಶಕ್ಕೆ ತೆಗೆದುಕೊಂಡರು.

ಏನಪಾ ಅಂದರೆ, ಮೈಸೂರು ದಕ್ಷಿಣ ಉಪ ನೋಂದಣಾಧಿಕಾರಿ ಕೆ.ಎಸ್. ಮಹದೇವಯ್ಯ ಅಕ್ರಮ ಆಸ್ತಿ ಗಳಿಸಿರುವುದು ನಿಜ ಎಂದು ಲೋಕಾಯುಕ್ತ ಪೊಲೀಸರು ಕೋರ್ಟಿನಲ್ಲಿ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ, ಭ್ರಷ್ಟ ಮಹದೇವಯ್ಯಗೆ ಇಲ್ಲಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಮೂರೂವರೆ ವರ್ಷ ಕಠಿಣ ಶಿಕ್ಷೆ ಮತ್ತು 60 ಲಕ್ಷ ರೂ. ದಂಡ ವಿಧಿಸಿ, ನ್ಯಾ. ಚಂದ್ರಮಲ್ಲೇಗೌಡ ಅವರು ಗುರುವಾರ ಶಿಕ್ಷೆಯ ತೀರ್ಪು ಪ್ರಕಟಿಸಿದರು.

ಪ್ರಕರಣ ಏನು: 1999ರಲ್ಲಿ ರಾಮನಗರದಲ್ಲಿ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹದೇವಯ್ಯ ನಿವಾಸ, ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮೈಸೂರಿನ ಸಿದ್ದಾರ್ಥ ಲೇಔಟ್‌ನಲ್ಲಿರುವ ಅವರ ಮನೆಯಲ್ಲಿ 1.3 ಕೆಜಿ ಚಿನ್ನಾಭರಣ, 25 ಕೆ.ಜಿ. ಬೆಳ್ಳಿ, ಮಳ್ಳವಳ್ಳಿಯಲ್ಲಿ 12 ಎಕರೆ ಜಮೀನು ಮತ್ತು ನಾಚನಹಳ್ಳಿ ಪಾಳ್ಯದ ನಿವೇಶನದ ದಾಖಲೆ ಹಾಗೂ 5.20 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದರು.

ವಿಚಾರಣೆಯಲ್ಲಿ ಮಹದೇವಯ್ಯ 67 ಲಕ್ಷ ರೂ. ಗಳಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ನ್ಯಾಯಾಲಯಕ್ಕೆ ಮನವರಿಕೆಯಾದ ಹಿನ್ನೆಲೆಯಲ್ಲಿ ಇಂದು ಅಂತಿಮ ವಿಚಾರಣೆ ನಡೆಸಿ ಮಹದೇವಯ್ಯಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಮಹದೇವಯ್ಯ ಹೆಚ್ಚು ದಂಡ ತೆರುವ ಶಿಕ್ಷೆ ಪಡೆದ ಎರಡನೆ ಅಧಿಕಾರಿ. ಈ ಹಿಂದೆ ಪ್ರಾಚ್ಯ ವಸ್ತು ಇಲಾಖೆಯ ಸಿದ್ದಪ್ಪಪೂಜಾರ ಎಂಬವರಿಗೆ 65 ಲಕ್ಷ ರೂ. ದಂಡ ವಿಧಿಸಲಾಗಿತ್ತು.

English summary
Sub-registrar K S Mahadevaiah was slapped with a fine of Rs 60 lakh and sentenced to three-and-a-half years of rigorous imprisonment after he was found guilty of owning properties disproportionate to his known sources of income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X