ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿ ವಿಠಲ ಬಂಧನದಲ್ಲಿ ತಪ್ಪಾಗಿಲ್ಲ: ಇನ್ಫಾಂಟ್

By Mahesh
|
Google Oneindia Kannada News

AR Infant DG IGP
ಮಂಗಳೂರು, ಏ.13: ಪತ್ರಿಕೋದ್ಯಮ ವಿದ್ಯಾರ್ಥಿ ಕುತ್ಲೂರಿನ ವಿಠಲ ಮಲೆಕುಡಿಯ ಬಂಧನದಲ್ಲಿ ಪೊಲೀಸರು ಯಾವುದೇ ತಪ್ಪು ಎಸೆಗಿಲ್ಲ. ವಿಠಲ ನಕ್ಸಲ್ ಚಟುವಟಿಕೆಯನ್ನು ಬೆಂಬಲಿಸುತ್ತಿದ್ದ. ಆತನನ್ನು ಇದೇ ಕಾರಣಕ್ಕೆ ಬಂಧಿಸಲಾಗಿದೆ ಎಂದು ಡಿಜಿ ಐಜಿಪಿ ಎಆರ್ ಇನ್ಫಾಂಟ್ ಸ್ಪಷ್ಟಪಡಿಸಿದ್ದಾರೆ.

ನಕ್ಸಲ್ ಜತೆ ಸಂಪರ್ಕ ಇಟ್ಟುಕೊಂಡು ತಾತ್ವಿಕ ಬೆಂಬಲ ಕೊಡುತ್ತಿದ್ದ. ಕೆಲವು ಆರೋಪದಡಿ ಬಂಧಿತನಾಗಿರುವ ವಿಠಲ ಅವರನ್ನು ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಶಸ್ತ್ರಾಸ್ತ್ರ ಪತ್ತೆಯಾದ ಬಗ್ಗೆ ವಿಚಾರಿಸಲಾಗುತ್ತಿದೆ ಎಂದ ಇನ್ಫಾಂಟ್ ಹೇಳಿದ್ದಾರೆ..

ಈ ನಡುವೆ ವಿಠಲ್ ಮಲೆಕುಡಿಯನಿಗೆ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ನ್ಯಾಯಮೂರ್ತಿಯವರು ವಿಠಲ್‌ಗೆ ಚಲನವಲನ, ಸಹವಾಸ ಖಚಿತತೆಯ ಬಗ್ಗೆ ಆಧಾರ ಸಿಕ್ಕದ ಮೇಲೆ ಜಾಮೀನು ನಿರಾಕರಿಸಿ ತೀರ್ಪು ನೀಡಿದ್ದಾರೆ.

ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ ಪುಸ್ತಕಗಳು, ಕರಪತ್ರಗಳು ಹಾಗೂ ಇನ್ನಿತರ ಕೆಲವು ವಿಷಯಗಳು ಪತ್ತೆಯಾಗಿದ್ದ ಕಾರಣಕ್ಕೆ ಆತನಿಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದೆ ಎಂದು ತಿಳಿದುಬಂದಿದೆ.

English summary
DG IGP AR Infant said police not made any mistake by taking Mangalore university journalism student Vittala Malekudiya into custody. ANF has enough proof to show he supported Naxal leaders in Udupi. Meanwhile Vittala not granted bail and judicial custody extended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X