10,000 ಉದ್ಯೋಗ ಕಡಿತಕ್ಕೆ ಮುಂದಾದ ಸೋನಿ

ಜಾಗತಿಕ ಮಟ್ಟದಲ್ಲಿ ಶೇ.6 ರಷ್ಟು ಮಾನವ ಸಂಪನ್ಮೂಲವನ್ನು ಕಡಿತಗೊಳಿಸಿ, ಸಂಸ್ಥೆಯನ್ನು ಪುನರ್ ರೂಪಿಸುವ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಟಿವಿ ಉತ್ಪಾದನೆಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಹಾಗೂ ಎಲ್ ಜಿ ಜೊತೆ ಸ್ಪರ್ಧೆಯಲ್ಲಿ ಸೋತಿರುವ ಸೋನಿ, ಆಪಲ್ ಜೊತೆ ಆಡಿಯೋ ಗೇರ್ ಹಾಗೂ ಫೋನ್ ಕ್ಶೇತ್ರದಲ್ಲೂ ಪೈಪೋಟಿ ನೀಡಲಾಗದೆ ಸೋತಿದೆ.
ವಾರ್ಷಿಕವಾಗಿ 6.4 ಬಿಲಿಯನ್ ಡಾಲರ್ ನಷ್ಟ ಹಾಗೂ ಶೇ 40 ರಷ್ಟು ಷೇರುಗಳ ಕುಸಿತದಿಂದ ಸೋನಿ ಕಂಗೆಟ್ಟಿದೆ. ಈಗ ಸೋನಿ ಸಂಸ್ಥ ಡಿಜಿಟಲ್ ಇಮೇಜಿಂಗ್, ಗೇಮ್ಸ್ ಹಾಗೂ ಮೊಬೈಲ್ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ.
2015ರೊಳಗೆ 10.5 ಬಿಲಿಯನ್ ಡಾಲರ್ ಲಾಭದ ನಿರೀಕ್ಷೆ ಹೊಂದಿದೆ. ವಾರ್ಷಿಕವಾಗಿ ಸುಮಾರು 20 ಮಿಲಿಯನ್ ಟವಿ ಸೆಟ್ ಮಾರಾಟ ಮಾಡುವ ಸೋನಿ ಲಾಭ ಸಿಗದೆ ಸಂಸ್ಥೆ ನಡೆಸುವುದು ದುಸ್ತರವಾಗಿದೆ.
ಮತ್ತೊಂದೆಡೆ ಪ್ರತಿಸ್ಪರ್ಧಿ ಜಪಾನಿನ ಶಾರ್ಪ್ ಸಂಸ್ಥೆ ಕೂಡಾ ವಾರ್ಷಿಕವಾಗಿ 4.7 ಬಿಲಿಯನ್ ನಷ್ಟ ಅನುಭವಿಸಿದೆ.












Click it and Unblock the Notifications