ಇನ್ಫೋಸಿಸ್ ಮೇಲೆ ವೀಸಾ ವಂಚನೆ ಆರೋಪ

ಅಮೆರಿಕದ ವೀಸಾ ನೀತಿ, ಬಿಸಿನೆಸ್ ವೀಸಾ ನಿಯಮಗಳನ್ನು ಮೀರಿ ಭಾರತದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುವ ಮೂಲಕ ದೊಡ್ಡ ವಂಚನೆ ಜಾಲದಲ್ಲಿ ಇನ್ಫೋಸಿಸ್ ಮುಳುಗಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಐಟಿ ತಜ್ಞರನ್ನು ನೇಮಕ ಮಾಡಿಕೊಳ್ಳದೆ ಅಕ್ರಮವಾಗಿ ಭಾರತೀಯ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ ಎಂದು ಜಾಬ್ ಕನ್ಸಲ್ಟೆಮ್ಟ್ ಜೇ ಪಾಮರ್ ಆರೋಪಿಸಿದ್ದಾರೆ.
ಆದರೆ, ಪಾಮರ್ ಅವರ ಆರೋಪಗಳನ್ನು ಅಲ್ಲಗೆಳೆದಿರುವ ಇನ್ಫೋಸಿಸ್ ಸಂಸ್ಥೆ, 'ಆರೋಪಗಳು ಉತ್ತಮ ಕಥೆಯನ್ನು ಸೃಷ್ಟಿಸಬಹುದೇ ವಿನಾ ಸತ್ಯವನ್ನು ಹೇಳುವುದಿಲ್ಲ' ಎಂದಿದೆ.
ಭಾರತದಿಂದ ಕರೆಸಿಕೊಳ್ಳುವ ಉದ್ಯೋಗಿಗಳಿಗೆ ಕಡಿಮೆ ಸಂಬಳ ನೀಡಿ, ಅಮೆರಿಕದ ಉದ್ಯೋಗಾರ್ಥಿಗಳಿಗೆ ವಂಚಿಸುತ್ತಿರುವ ಆರೋಪವೂ ಇನ್ಫೋಸಿಸ್ ಮೇಲೆ ಹೊರೆಸಲಾಗಿದೆ.
ಎಚ್ -1ಬಿ ವೀಸಾ ಮೇಲೆ ಯುಎಸ್ ಎ ಕಡಿವಾಣ ಹಾಕಿದ ಮೇಲೆ ಬಿ-1 ವೀಸಾ ಬಳಸಿ ತನ್ನ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ ಎಂದು ಪಾಮರ್ ಆರೋಪಿಸಿದ್ದಾರೆ.












Click it and Unblock the Notifications