ಯಡಿಯೂರಪ್ಪ 'ಕೈ' ಹಿಡಿಯಲ್ಲ, ಕಮಲ 'ಕೈ' ಬಿಡಲ್ಲ: ರೇಣು

ಏ.28ರಂದು ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಗಮಿಸುತ್ತಿದ್ದಾರೆ.
ಇದು ಕೇವಲ ಕಾಂಗ್ರೆಸ್ ಪಕ್ಷದ ಸಮಾರಂಭವಾಗಲಿದೆ ಎಂಬುದು ಕೂಡಾ ಸತ್ಯಕ್ಕೆ ದೂರವಾದ ಮಾತು. ಸಾರ್ವಜನಿಕವಾಗಿ ಶ್ರೀಗಳಿಗೆ ದೊಡ್ಡದೊಂದು ಗೌರವ ಸಲ್ಲಿಸುವುದು ಇದರ ಉದ್ದೇಶ ಎಂದರು.
ಕೋರ್ಟ್ ಕೇಸ್ ಗಳಿಂದ ಬಚಾವಾಗಲು ಯಡಿಯೂರಪ್ಪ ಅವರು ಕಾಂಗ್ರೆಸ್ ಮೊರೆ ಹೋಗಲಿದ್ದಾರೆ ಎಂಬ ಊಹಾಪೋಹ ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿತ್ತು. ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಮತ್ತೆ ನೀಡಲು ಹೈಕಮಾಂಡ್ ನಿರಾಕರಿಸಿ ವಿಳಂಬ ಧೋರಣೆ ಅನುಸರಿಸುವುದರಿಂದ ಬೇಸತ್ತು ಯಡಿಯೂರಪ್ಪ, ಕಾಂಗ್ರೆಸ್ ಹಿಂದೆ ಬಿದ್ದಿದ್ದಾರೆ ಎನ್ನಲಾಗಿತ್ತು.
ಆದರೆ, ಬಿಜೆಪಿ ಹೈಕಮಾಂಡ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅಬಕಾರಿ ಸಚಿವ ರೇಣುಕಾಚಾರ್ಯ, ಬಿಜೆಪಿ ಪಕ್ಷದ ದೊಡ್ಡ ನಾಯಕರಾದ ಯಡಿಯೂರಪ್ಪ ಅವರು ಪಕ್ಷ ತೊರೆಯುವ ಮಾತೇ ಇಲ್ಲ. ಕಾಂಗ್ರೆಸ್ ಸೇರುವುದೂ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.












Click it and Unblock the Notifications