ಪತ್ನಿಯಿಂದ ವಿಚ್ಛೇದನ : ಆಘಾತಗೊಂಡ ಗಂಡ ಆತ್ಮಹತ್ಯೆ

ಮೃತನನ್ನು ನವನಾಥ್ ರೋಹಿತದಾಸ್ ಧಾಣೇಪಕರ (30) ಎಂದು ಗುರುತಿಸಲಾಗಿದೆ. ನವನಾಥ್ ವಡಗಾಂವ್‌ದಲ್ಲಿರುವ ನೀರಾವರಿ ಇಲಾಖೆಯಲ್ಲಿ ಕಾರಕೂನನಾಗಿ ಕೆಲಸ ಮಾಡುತ್ತಿದ್ದ. ಮುಂಡ್ವಾದ ನಿವಾಸಿಯಾಗಿರುವ 24 ವರ್ಷದ ಆತನ ಪತ್ನಿ ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಪೊಲೀಸರ ಪ್ರಕಾರ, ಈ ಹಿಂದೆ ಕೂಡ ನವನಾಥ್ ಆತ್ಮಹತ್ಯೆಗೆ ಯತ್ನಿಸಿದ್ದ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಬೆದರಿಕೆ ಹಾಕುತ್ತಿದ್ದ. ಗುರುವಾರ ನವನಾಥ್ ಮತ್ತು ಆತನ ಪತ್ನಿಯ ನಡುವೆ ಜಗಳ ಆರಂಭವಾಗಿದೆ. ನಂತರ, ಮದುವೆ ಮುರಿಯುವುದಾಗಿ ಪತ್ನಿ ಹೇಳಿದ್ದರಿಂದ ಬೇಸರಿಸಿಕೊಂಡ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನವನಾಥ್‌ನ ಪತ್ನಿಯ ವಕೀಲರ ಪ್ರಕಾರ, ಮದುವೆಗೂ ಮುನ್ನ ನವನಾಥ್ ಸಹೋದ್ಯೋಗಿಯಾಗಿದ್ದ ತನ್ನ ಪತ್ನಿಯನ್ನು ಪ್ರೇಮಿಸುತ್ತಿದ್ದ. ಆಕೆ ನಿರಾಕರಿಸಿದರೂ ಬಿಡದೆ ಆಕೆಯ ಹಿಂದೆ ಬಿದ್ದಿದ್ದ ಮತ್ತು ಮದುವೆಯಾಗದಿದ್ದರೆ ಜೀವ ಕಳೆದುಕೊಳ್ಳುವುದಾಗಿ ಹೇಳಿ ಆಕೆಯನ್ನೂ ಪೀಡಿಸುತ್ತಿದ್ದ. ಒಂದು ಬಾರಿ ನರ ಕಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೊನೆಗೊಂದು ದಿನ ಬೆದರಿಕೆ ಹಾಕಿ ಮದುವೆಯನ್ನೂ ಮಾಡಿಕೊಂಡ.
ಮದುವೆಯಾಗಿದ್ದರೂ ಅವರಿಬ್ಬರು ಬೇರೆಬೇರೆಯಾಗಿ ವಾಸಿಸುತ್ತಿದ್ದರು ಮತ್ತು ಮದುವೆಯನ್ನು ಮುಚ್ಚಿಟ್ಟಿದ್ದರು. ಆಗಾಗಾ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ನವನಾಥ್ ತನ್ನ ಪತ್ನಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಿಕ್ಷಿಸುತ್ತಿದ್ದ. ಆತನ ಪೀಡನೆ ತಾಳಲಾರದೆ ವಿಚ್ಛೇದನ ಮಾಡಿಕೊಳ್ಳುವುದಾಗಿ ಆಕೆ ಗಂಡನಿಗೆ ಹೇಳಿದ್ದಳು. ತಮ್ಮಿಬ್ಬರ ಮದುವೆಯನ್ನು ಅನೂರ್ಜಿತಗೊಳಿಸಬೇಕೆಂದು ಆಕೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ಮನನೊಂದ ಗಂಡ ಕಟ್ಟಡದಿಂದ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.












Click it and Unblock the Notifications