ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ತಾರಾ ವೇಶ್ಯಾವಾಟಿಕೆ: ರಾಜಕೀಯದಲ್ಲಿ ಬಿರುಗಾಳಿ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  prostitution-telugu-actress-tara-choudhary-held
  ಹೈದರಾಬಾದ್, ಏ.5: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ತೆಲುಗು ಚಿತ್ರರಂಗದ ಕಿರುನಟಿಯೊಬ್ಬಳನ್ನು ಬಂಧಿಸಿದ್ದೇ ಬಂತು ಆಂಧ್ರ ರಾಜಕೀಯದಲ್ಲಿ ಬಿರುಗಾಳಿ ಎದ್ದಿದ್ದು, ರಾಜಕಾರಣಿಗಳು, ಐಎಎಸ್ ಮತ್ತು ಐಪಿಎಸ್ ಕುಳಗಳು ಹುಳಗಳಂತೆ ಪಥರಗುಟ್ಟುತ್ತಿದ್ದಾರೆ. ಸದ್ಯಕ್ಕೆ ನ್ಯಾಯಾಂಗ ಬಂಧದಲ್ಲಿರುವ ಪ್ರಕರಣ ನಾಂಪಲ್ಲಿ ಕ್ರಿಮಿನಲ್ ಕೋರ್ಟಿನಲ್ಲಿ ಶನಿವಾರ ವಿಚಾರಣೆಗೆ ಬರಲಿದೆ.

  ತಾರಾ ಚೌಧರಿ ಎಂಬ ಈ ನಟಿಮಣಿ ಪೊಲೀಸರ ಮುಂದೆ ಬಾಯ್ಬಿಟ್ಟರೆ ದೊಡ್ಡ ದೊಡ್ಡ ತಲೆಗಳೇ ಉರುಳಲಿವೆ. ಇಷ್ಟಕ್ಕೂ ಈ ತಾರಾ ಚೌಧರಿ ಹೇಗೆ ಕಾರ್ಯವೆಸಗುತ್ತಿದ್ದಳು ಅಂದರೆ ದೊಡ್ಡ ದೊಡ್ಡ ನಾಯಕರು, ಅಧಿಕಾರಿಗಳಿಗೆ ಪಸಂದಾದ ಬೆಲೆವೆಣ್ಣುಗಳ ರುಚಿ ತೋರಿಸಿ, ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಆ ಪುರುಷ ಪುಂಗವರು ಮಂಚದ ಮೇಲೆ ಮೈಚಾಚುತ್ತಿದ್ದಂತೆ ಆ ದೃಶ್ಯಾವಳಿಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಳು.

  ತೀಟೆ ತೀರಿದ ಮೇಲೆ ಮಂಚದಿಂದೆದ್ದ ಪುರುಷ ಪುಂಗವರಿಗೆ ರಾಜಕೀಯ ಸ್ತರದಲ್ಲಿ ಕೆಲಸ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದಳು. ಇಲ್ಲವೇ ದುಡ್ಡಿಗೆ ಬೇಡಿಕೆಯಿಡುತ್ತಿದ್ದಳು. ಮೈಕೊಡವಿಕೊಂಡು ಅದೆಲ್ಲ ಆಗಾಕಿಲ್ಲ ಅಮ್ಮಿ ಅಂತ ಪುರುಷ ಪುಂಗವರು ಪುಂಗಿ ಊದಲು ಹೋದರೆ 'ಹಂಗಾ, ನೋಡೀವಂತೆ ಇರು ನಿನ್ನ ಪರಾಕ್ರಮ' ಅಂತ ವಿಡಿಯೋ ಬಿತ್ತರಿಸುತ್ತಿದ್ದಳು ಬಿತ್ತರಿ ತಾರಾ.

  ಇಂತಿಪ್ಪ ತಾರಾಳ ಲ್ಯಾಪ್ ಟಾಪ್, ಸ್ಪೈ ಕ್ಯಾಮರಾ ಹಾಗೂ ಪರ್ಸನಲ್ ಡೈರಿಯನ್ನು ಬಂಜಾರಾ ಹಿಲ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, 'ಶ್ರೀವಾರಿ ಮುಚ್ಚಟ್ಲು' ಬಯಲಿಗಿಡಲಿದ್ದಾರೆ. ಈ ಹಿಂದೆಯೂ ತಾರಾಳನ್ನು ಬಂಧಿಸಿದ್ದೆವು. ಆದರೆ ತನ್ನ ರಾಜಕೀಯ ಪ್ರಭಾವ ಬೀರಿ, ಮಾಯವಾಗುತ್ತಿದ್ದಳು.

  ತಾರಾಳ ಗೆಳೆಯ ರತಿನೇನಿ ದುರ್ಗಾಪ್ರಸಾದನನ್ನು ಸಹ ಬಂಧಿಸಲಾಗಿದ್ದು, ದಿವಂಗತ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಜತೆ ತಾರಾ ಅದ್ಯಾವಗಲೋ ಫೋಟೋ ತೆಗೆಸಿಕೊಂಡಿದ್ದು, ಅದರಿಂದಲೇ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅದೃಶ್ಯಂ, ರಾಕ್ಷಸುಡು, ಪ್ರಿಯಾ ಸಖಿ, ಲವ್ ಟಿಕೆಟ್ ಮುಂತಾದ ಚಿತ್ರಗಳಲ್ಲಿ ಈಕೆ ಅಭಿನಯಿಸಿದ್ದಾಳೆ.

  ತೆಲುಗು ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ತಾರಾ ಮೋಸ ಮಾಡಿದ್ದಾಳೆ ಎಂದು ವಿಶಾಖಪಟ್ಟಣದ ಯುವತಿಯೊಬ್ಬಳು ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಅದಕ್ಕೂ ಮುನ್ನ ನಿರ್ದೇಶಕ ಚಿನ್ನಿ ಕೃಷ್ಣ ಜತೆಯೂ ತಾರಾ ರಂಪಾಟ ಮಾಡಿಕೊಂಡಿದ್ದಳು. ತಾರಾ ಅನೇಕ ಯುವತಿಯರಿಗೆ ಹೀಗೆ ಮೋಸ ಮಾಡಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Andhra Pradesh - Hyderabad Crime News : Banjara Hills police have arrested actress Tara Choudhary recently on charges if immoral traffic. It is said, her celebrity customers include well known politicians and top level bureaucrats including officers from IAS and IPS cadres. Her Spy Camera which is seized by Banjara police is expected to through lot of information to the officers investigating the sensational case

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more