ಜೆಡಿಎಸ್ ಶಾಸಕರು ಮುಡಾ ಸೈಟು ನುಂಗಿದ ಕಥೆ

ಈ ಇಬ್ಬರು ಶಾಸಕರು ಮೈಸೂರು ಮುಡಾದಲ್ಲೂ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಮೈಸೂರು ಕಾಂಗ್ರೆಸ್ ಘಟಕ ಆರೋಪಿಸಿದೆ.
ಈ ಶಾಸಕರಿಬ್ಬರೂ ಮಂಡ್ಯ ಮುಡಾದಲ್ಲಿ ಅಕ್ರಮ ನಿವೇಶನ ಪಡೆದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ವಕೀಲ ಟಿ.ಎಸ್.ಸತ್ಯಾನಂದ ಅವರು ಈಗ ಮೈಸೂರು ಮುಡಾದ ಅಕ್ರಮವನ್ನು ಬಯಲಿಗೆಳೆದಿದ್ದಾರೆ.
ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಹಾಗೂ ಸಿಎಸ್ ಪುಟ್ಟರಾಜು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಕಬಳಿಸಿರುವ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಟಿಎಸ ಸತ್ಯಾನಂದ ಬಿಡುಗಡೆ ಮಾಡಿದರು.
ಇಬ್ಬರು ಶಾಸಕರಿಗೆ ಸಿಕ್ಕಿರುವ ಭರ್ಜರಿ ನಿವೇಶನದ ಸೈಜ್ ಏನು? ಪಕ್ಷದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೆ ತಿಳಿಯದಂತೆ ಈ ಅಕ್ರಮ ನಡೆದಿದೆಯೇ? ಮುಂದೆ ಓದಿ...












Click it and Unblock the Notifications