ಎಚ್ಡಿಕೆಗೆ ಶಾಸಕರ ಸೈಟ್ ನುಂಗಿದ್ದು ಗೊತ್ತಿಲ್ವೇ?

ಮಂಡ್ಯ ಮುಡಾದಿಂದ ಸುಮಾರು 107 ನಿವೇಶನಗಳನ್ನು ನಿಮಯ ಮೀರಿ ನೀಡಲಾಗಿದೆ. ಮುಡಾ ಅಧ್ಯಕ್ಷೆ, ಬಿಜೆಪಿಯಿಂದ ನಾಮಾಂಕಿತರಾದ ವಿದ್ಯಾ ನಾಗೇಂದ್ರ ಅವರನ್ನು ಕೂಡಾ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ.
ಮಂಡ್ಯ ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಅವರ ಕುಟುಂಬ ವರ್ಗದ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.
ನಿವೇಶನ ಹೇಗಿದೆ: ಶ್ರೀರಂಗಪಟ್ಟಣ ಶಾಸಕ ರಮೇಶ್, ತನ್ನ ತಾಯಿ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮರಿಗೆ (50 X 80), ಪತ್ನಿ ಸುಮತಿಗೆ (60 X 40) ಹಾಗೂ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜುರ ಪತ್ನಿ ನಾಗಮ್ಮರಿಗೆ (50 X 80)ನಿವೇಶನ ನೀಡಿದ್ದಾರೆ.
ಮೈಸೂರಿನಲ್ಲಿ 2007ರಲ್ಲಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಮಂಜೂರು ಮಾಡಿತ್ತು. ಇದೇ ಶಾಸಕರು ಬೆಂಗಳೂರಿನಲ್ಲಿ ನಿವೇಶನ ಪಡೆದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇಷ್ಟೇ ಅಲ್ಲ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ನಿವೇಶನ ಕಬಳಿಸಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯದ ಹಲವು ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣ ಗಳನ್ನು ಬಯಲಿಗೆಳೆದಿದ್ದೇವೆ ಎಂದು ಬೀಗುವ ಕುಮಾರಸ್ವಾಮಿ ತನ್ನ ಸ್ವಪಕ್ಷೀಯ ಶಾಸಕರ ಭೂ ಸ್ವಾಹದ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಸತ್ಯಾನಂದ ಪ್ರಶ್ನಿಸಿದ್ದಾರೆ.












Click it and Unblock the Notifications