ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಪ್ರತಿಕೃತಿ ದಹಿಸಿದ ಕನ್ನಡಿಗರು

By Mahesh
|
Google Oneindia Kannada News

Kannada Activist against Jayalalithaa
ಚಾಮರಾಜನಗರ ಎ.2: ಮೇಕೆದಾಟುನಲ್ಲಿ ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸುತ್ತಿರುವುದಕ್ಕೆ ತಮಿಳುನಾಡಿನ ಮುಖ್ಯ ಮಂತ್ರಿ ಜಯಲಲಿತಾ ವಿರೋಧಿಸುತ್ತಿರುವುದು ಗಡಿಭಾಗದ ಕನ್ನಡಿಗರಿಗೆ ಉರಿ ಉಂಟು ಮಾಡಿದೆ.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲೂ ಅನಗತ್ಯವಾಗಿ ಕರ್ನಾಟಕದ ವಿರುದ್ಧ ಜಯಲಲಿತಾ ಅವರು ಹೇಳಿಕೆಗಳನ್ನು ನೀಡುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟ, ರೈತಸಂಘದವರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಭುವನೇಶ್ವರಿ ವೃತ್ತದಲ್ಲಿ ಜಯಲಲಿತಾರ ಭಾವಚಿತ್ರ, ಪ್ರತಿಕೃತಿಯನ್ನು ದಹಿಸುವುದರ ಮೂಲಕ ಪ್ರತಿಭಟನೆ ನಡೆಸಿ ಜಯಲಲಿತಾ ಹಾಗೂ ತಮಿಳುನಾಡು ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಯಲಲಿತಾ ಕರ್ನಾಟಕದಲ್ಲಿ ಅಣೆಕಟ್ಟು ಕಟ್ಟುತ್ತಿರುವುದನ್ನು ವಿರೋಧಿಸುತ್ತಿರುವುದು ನಾಚಿಕೆಗೇಡಿನ ವಿಷಯ. ಸರ್ಕಾರ ಕರ್ನಾಟಕ ನೆಲದಲ್ಲಿ ಅಣೆಕಟ್ಟು ಕಟ್ಟುತ್ತಿದೆ, ತಮಿಳುನಾಡಿನಲ್ಲಿ ಕಟ್ಟುತ್ತಿಲ್ಲ.

ಜಯಲಲಿತಾರವರು ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದು ಇಂದು ಅಧಿಕಾರ ಆಸೆಗಾಗಿ ಕರ್ನಾಟಕದ ಬಗ್ಗೆ ಹಾಗೂ ಕರ್ನಾಟ ಕದ ನೆಲದಲ್ಲಿ ಕಟ್ಟುತ್ತಿರುವ ಅಣೆಕಟ್ಟಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಜಯಲಲಿತಾರ ಕನ್ನಡ ವಿರೋಧಿ ನೀತಿಯನ್ನು ತೋರಿಸುತ್ತಿದೆ ಎಂದು ಕರ್ನಾಟಕ ಸೇನಾ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ರೀತಿ ಜಯಲಲಿತಾರ ಕನ್ನಡ ವಿರೋಧಿ ವರ್ತನೆ ಮುಂದುವರಿದಲ್ಲಿ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ. ಮುರುಳಿ ಎಚ್ಚರಿಸಿದರು.

English summary
Karnataka Tamilnadu Water Dispute: Kannada activists and farmers from border city Chamarajnagar held protest Tamilnadu CM Jayalalithaa for Proposing irrigation dam across river cauvery at Mekedatu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X