ಸಿಐಡಿ ಸೀರಿಯಲ್ ನೋಡಿ ಕಿಡ್ನಾಪ್, ಕೊಲೆ

Crime Serial inspires Murder Pune
ಪುಣೆ, ಎ.2: ಜನಪ್ರಿಯ ಪತ್ತೇದಾರಿ ಧಾರಾವಾಹಿಯಿಂದ ಪ್ರೇರಣೆಗೊಂಡ ಮೂವರು ಸ್ನೇಹಿತರು 16 ವರ್ಷದ ಬಾಲಕನನ್ನು ಅಪಹರಿಸಿ, ರು.50,000 ಒತ್ತೆ ಹಣಕ್ಕಾಗಿ ನಂತರ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಇಲ್ಲಿನ ದಿಗಿ ಪ್ರದೇಶದಿಂದ ಶುಭಂ ಮಹಾದೇವ ಶಿರ್ಕೆ ಎಂಬ ಬಾಲಕನನ್ನು ಅಪಹರಿಸಿ, ಆತನನ್ನು ಸಮೀಪದ ಗುಡ್ಡವೊಂದಕ್ಕೆ ಕರೆದೊಯ್ದು ಆತನ ತಂದೆಗೆ ದೂರವಾಣಿ ಕರೆ ಮಾಡಿ 50,000 ರು ಒತ್ತೆ ಹಣ ನೀಡುವಂತೆ ಬೆದರಿಸಿದ್ದಾರೆ.

ಮಾತುಕತೆಯ ನಂತರ ಒತ್ತೆ ಹಣವನ್ನು ರೂ. 15,000ಕ್ಕೆ ಇಳಿಸಲಾಗಿತ್ತು. ನಂತರ ಬಾಲಕನ ತಂದೆ ಮಹದೇವ್ ಶಿರ್ಕೆ ನಿಗದಿತ ಜಾಗಕ್ಕೆ ತೆರಳಿ ಒತ್ತೆ ಹಣವನ್ನು ನೀಡಿದ್ದರು.

ನಂತರ ತಮ್ಮ ಮಗನನ್ನು ಅಪಹರಣಕಾರರು ಬಿಡುಗಡೆ ಮಾಡದಿದ್ದ ಹಿನ್ನೆಲೆಯಲ್ಲಿ ಅವರು ಸಮೀಪದ ವಿಶ್ವರಂತ್ವಾಡಿ ಪೊಲೀಸರ ಮೊರೆ ಹೋದರು.ಆದರೆ, ಅಷ್ಟರಲ್ಲಿ ಶುಭಂ ಶಿರ್ಕೆಯನ್ನು ಕೊಲೆ ಮಾಡಿ ಅಪಹರಣಕಾರರು ಪರಾರಿಯಾಗಿದ್ದರು.

ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ಪೊಲೀಸ್ ಇನ್ಸ್‌ಪೆಕ್ಟರ್ ಪಾಂಡುರಂಗ ಗೊಫಾನೆ ತೃತ್ವದ ತಂಡ ಮೂವರನ್ನು ಬಂಧಿಸಿದ್ದಾರೆ.

ಮೃತ ಬಾಲಕ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು, ಬಂಧಿತ ಮೂವರಲ್ಲಿ ಒಬ್ಬ ಆತನ ಸಹಪಾಠಿಯಾಗಿದ್ದು, ಮತ್ತೊಬ್ಬ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಎಂದು ಡಿಸಿಪಿ ಸಂಜಯ್ ಜಾಧವ್ ತಿಳಿಸಿದ್ದಾರೆ.

ನೈಜ ಅಪರಾಧ ಘಟನೆಗಳನ್ನು ಆಧರಿಸಿ ಟಿವಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿರುವ ಸಿಐಡಿ ಕಾರ್ಯಕ್ರಮವನ್ನು ನೋಡುತ್ತಿದ್ದ ಮೂವರು ಆರೋಪಿಗಳು ಅದರಿಂದ ಸ್ಫೂರ್ತಿಗೊಂಡು ಈ ಕೃತ್ಯವೆಸಗಿದ್ದಾರೆ ಎಂಬುದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+