• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರಡಿ ನೀತು ಹುಯ್ದ ಹನ್ನೆರಡಡಿ ಬೃಹತ್ ದೋಸೆ

By * ಪ್ರಸಾದ ನಾಯಿಕ
|
ಬೆಂಗಳೂರು, ಏ. 2 : 'ಬೇರು' ಚಿತ್ರದ ಸಂಪ್ರದಾಯಸ್ಥ ಗೃಹಿಣಿ, 'ಗಾಳಿಪಟ' ಚಿತ್ರದ ಬಜಾರಿ, ಆರಡಿ ಎತ್ತರದ ಅಜಾನುಬಾಹು ಕನ್ನಡ ನಟಿ ನೀತು ಅವರ ಟಚ್‌ನಿಂದ ಮತ್ತು ಅಕ್ಕಪಕ್ಕದಲ್ಲಿ ನಿಂತಿದ್ದ ಐವರು ಬಾಣಸಿಗರ ಕೈಚಳಕದಿಂದ ವಿವಿಪುರಂನಲ್ಲಿರುವ ದೋಸೆಮನೆ ಎದುರಿನಲ್ಲಿ ಹನ್ನೆರಡು ಅಡಿ ದೋಸೆ ಹತ್ತೇ ನಿಮಿಷದಲ್ಲಿ ರೆಡಿ. ಸುತ್ತಲೂ ಮೂಗರಳಿಸಿ ವಾಸನೆ ಗ್ರಹಿಸುತ್ತಿದ್ದ ದೋಸೆಪ್ರಿಯರಿಂದ ಚಪ್ಪಾಳೆಗಳ ಸುರಿಮಳೆ.

ಹುಣ್ಣಿಮೆ ಚಂದ್ರನಾಕಾರದ ಡಿಸೈನ್ ಇರುವ ಕಪ್ಪು ಬಣ್ಣದ ಫ್ರಾಕ್ ತೊಟ್ಟು ಬಂದಿದ್ದ ನೀತು, ಆ ಹಬೆಗೆ ಬಳಬಳನೆ ಸುರಿಯುತ್ತಿದ್ದ ಬೆವರನ್ನೂ ಲಕ್ಷಿಸದೆ ದೋಸೆ ಹಿಟ್ಟನ್ನು ಬಾಣಸಿಗರ ಜೊತೆಗೂಡಿ ಹುಯ್ದರು. ನಗುನಗುತ್ತಲೇ ಕ್ಯಾಮೆರಾಮನ್‌ಗಳು ಕೇಳಿದಾಗಲೆಲ್ಲ ಪೋಸ್ ನೀಡುತ್ತಿದ್ದರು. ದೋಸೆ ರೆಡಿಯಾದ ನಂತರ ದೋಸೆ (ತಿನ್ನುವ) ಬಗ್ಗೆ ತಮಗಿರುವ ಆಸಕ್ತಿಯನ್ನೂ ಮಾಧ್ಯಮದವರೊಂದಿಗೆ ಹಂಚಿಕೊಂಡರು.

ತಾವು ದಕ್ಷಿಣ ಕನ್ನಡದವರಾದ್ದರಿಂದ ಅನೇಕ ದೋಸೆಗಳನ್ನು ನೋಡಿದ್ದೇನೆ, ತಿಂದಿದ್ದೇನೆ. ಆದರೆ, ಇಂತಹ ದೊಡ್ಡ ದೋಸೆಯನ್ನು ಎಲ್ಲೂ ನೋಡಿರಲಿಲ್ಲ. ನನಗೆ ಮಾತ್ರ ದೋಸೆ ತಿಂದು ಗೊತ್ತೇ ಹೊರತು, ಮಾಡಿ ಗೊತ್ತಿಲ್ಲ. ಅದೇನಿದ್ದರೂ ನಮ್ಮ ಅಮ್ಮನ ಕೆಲಸ, ತಿನ್ನುವುದು ಮಾತ್ರ ನನ್ನ ಕೆಲಸ. ಅದರಲ್ಲೂ ನೀರು ದೋಸೆ ಅಂದ್ರೆ ಪಂಚಪ್ರಾಣ ಎಂದು ನೀತು ದೋಸೆಗಳ ಬಗೆಗಿನ ತಮ್ಮ ಆಸೆಯ ಬಗ್ಗೆ ಹೇಳಿಕೊಂಡರು.

ಕಳೆದ ಇಪ್ಪತ್ತೈದು ವರ್ಷಗಳಿಂದ ಊಟ ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿರುವ ಮತ್ತು ಒಂದು ವರ್ಷದಿಂದ ಬೆಂಗಳೂರಿನಲ್ಲಿ ಆರಂಭಿಸಲಾಗಿರುವ ದೋಸೆಮನೆಯಲ್ಲಿ ವೈವಿಧ್ಯಮಯ ದೋಸೆಗಳನ್ನು ಉಣಬಡಿಸುತ್ತಿರುವ ವೆಂಕಟ್‌ರಾಜ್ ಭಟ್ ಅವರ ಕಲ್ಪನೆಯಲ್ಲಿ ಮೂಡಿಬಂದ ಬೃಹತ್ ದೋಸೆಯಿದು. ಆದರೆ, ಆ ಹನ್ನೆರಡಡಿ ದೋಸೆ ಮಾಡಿದ್ದು ತಿನ್ನಲಿಕ್ಕಲ್ಲ, ದಾಖಲೆಗಾಗಿ ಮತ್ತು ಜನರನ್ನು ಆಕರ್ಷಿಸಲು. [ದೋಸೆ ತಯಾರಿಸಿದ ರೀತಿ ಇಲ್ಲಿದೆ ನೋಡಿರಿ]

ಏನಾದರು ಮಾಡುತಿರು ಮಂಕುತಿಮ್ಮ : ಬೆಂಗಳೂರಿನಲ್ಲಿ ಗಲ್ಲಿಗೊಂದರಂತೆ ದೋಸೆ ಕ್ಯಾಂಪ್‌ಗಳು ಸಿಗುತ್ತವೆ. ನೂರಾಒಂದು ದೋಸೆ ತಯಾರಿಸುವ ಹೋಟೆಲ್ ಕೂಡ ಎದ್ದು ನಿಂತಿದೆ. ಅವರೆಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ವೆಂಕಟ್‌ರಾಜ್ ಅವರು 108 ರುಚಿಕಟ್ಟಾದ ದೋಸೆಗಳನ್ನು ನಮಗೆ ನೀಡುತ್ತಿದ್ದಾರೆ. ಏಪ್ರಿಲ್ 1ರಿಂದ 8ರವೆಗೆ ಕೇವಲ 20 ರು.ಗೆ ದೋಸೆಮನೆ ಹೋಟೆಲ್ ಕೆಳಮಹಡಿಯಲ್ಲಿ ದೋಸೆಗಳು ಲಭ್ಯ. ವಿವಿಧ ರುಚಿಗಳನ್ನು ಬಯಸುವ ಜಿಹ್ವಾಚಾಪಲ್ಯ ಇರುವವರಿಗೆ ದೋಸೆಮನೆ ಹಬ್ಬ ನಿಜಕ್ಕೂ ಹಬ್ಬ.

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಒನ್ಇಂಡಿಯಾ ಕನ್ನಡದೊಡನೆ ಹಂಚಿಕೊಂಡ ವೆಂಕಟ್‌ರಾಜ್ ಅವರು, "ಹನ್ನೆರಡಡಿ ದೋಸೆಗಿಂತಲೂ ದೊಡ್ಡದಾದ ದೋಸೆ ಮಾಡಿ ದಾಖಲೆ ಸೃಷ್ಟಿಸುವ ಇರಾದೆಯಿದೆ. ಮುಂದಿನ ವರ್ಷ ಮಾಡುತ್ತೇನೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರನ್ನು ಸೆಳೆಯಲು ಏನಾದರೂ ಮಾಡುತ್ತಿರಬೇಕು" ಎಂದರು. ಮತ್ತೊಂದು ಪ್ರಶ್ನೆಗೆ, "ಇಲ್ಲಿ ನೂರೆಂಟು ದೋಸೆ ದೊರೆಯುತ್ತವಾದರೂ ಸಿಕ್ಸರ್ ಖಾರ ದೋಸೆ ವಿಶಿಷ್ಟವಾದದ್ದು ಮತ್ತು ನನಗೆ ತಿಳಿದ ಮಟ್ಟಿದೆ ಯಾವ ಹೋಟೆಲಿನಲ್ಲಿ ದೊರೆಯುವುದಿಲ್ಲ" ಎಂದು ಹೆಮ್ಮೆಯಿಂದ ಹೇಳಿದರು. ಆ ಸಿಕ್ಸರ್ ಖಾರ ದೋಸೆ ಬೆಲೆ ಕೇವಲ 110 ರು. ಮಾತ್ರ!

ಬೆಂಗಳೂರಿನ ವಿವಿಪುರಂನಲ್ಲಿರುವ ಮಹಾವೀರ ಜೈನ್ ಕಾಲೇಜು ಎದುರುಗಡೆ ಇರುವ ದೋಸೆಮನೆಯಲ್ಲಿ ಎಂಟು ದಿನಗಳ ದೋಸೆಮನೆ ಹಬ್ಬವನ್ನು ಆಯೋಜಿಸಲಾಗಿದೆ. ಏಪ್ರಿಲ್ 1ರಂದು ಆರಂಭವಾಗಿದ್ದರಿಂದ ಏಪ್ರಿಲ್ ಫೂಲ್ ಇರಬಹುದೇನೋ ಎಂದು ಮಾಧ್ಯಮದವರು ಮತ್ತು ಭಟ್ ಕುಟುಂಬದ ಸದಸ್ಯರು ಮಿತ್ರರು ಹೊರತಾಗಿ ಹೆಚ್ಚಿನ ಜನ ನೆರೆದಿರಲಿಲ್ಲ. ಕೆಳಮಹಡಿಯಲ್ಲಿ ಕಡಿಮೆ ಬೆಲೆಗೆ ದೊರೆಯುವ ದೋಸೆಗಳು, ಮೇಲ್ಮಹಡಿಯಲ್ಲಿರುವ ಹವಾನಿಯಂತ್ರಿತ ಕೋಣೆಯಲ್ಲಿ 20 ರು.ಗೆ ದೊರೆಯುವುದಿಲ್ಲ, ನೆನಪಿನಲ್ಲಿಡಿ. ಕುಟುಂಬಸಮೇತರಾಗಿ ಹೋಗಿ ಮೈಮರೆತು ಸಖತ್ತಾಗಿ ತೂತಿನ ದೋಸೆ ತಿಂದರೆ ಜೇಬಿಗೂ ತೂತು ಬಿದ್ದೀತು ಜೋಕೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Beru and Galipata fame Kannada actress Neetu spreads 12 feet big dosa at Dosemane hotel in VV Puram in Bangalore on April 1, 2012. The person behind this big feet is Venkatraj Bhat from Dakshina Kannada. He is offering Dosas at lower cost to the people from April 1 to 8.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more