ಮೀಟರ್ ಬಡ್ಡಿ ದಂಧೆಯವರಿಗೆ ಪಾಲಿಕೆ ನೀಡಿದ ಭಾರೀ ಪೆಟ್ಟು

ಅವ್ಯಾಹುತವಾಗಿ ಬೆಳೆಯುತ್ತಿರುವ ಮೀಟರ್ ಬಡ್ಡಿ ದಂಧೆ ತಡೆಯುವ ಸಲುವಾಗಿ ಪಾಲಿಗೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆಯುಕ್ತ ಕೆ ಎಸ್ ರಾಯ್ಕರ್ ಹೇಳಿಕೆ ನೀಡಿದ್ದಾರೆ. ಈ ಸಾಲದ ಉಪಯೋಗ ಪಡೆಯುವ ವ್ಯಾಪಾರಿಗಳು ತಾವು ಪಡೆದ ಹಣವನ್ನು ಪ್ರತಿನಿತ್ಯ ಪಾಲಿಕೆಗೆ ಸಂಜೆ ಹಿಂದಿರುಗಿಸಬೇಕು ಅಲ್ಲದೆ ವ್ಯಾಪಾರಿಗಳು ಈ ಹಣಕ್ಕೆ ಯಾವುದೇ ಬಡ್ಡಿ ನೀಡುವ ಅವಶ್ಯಕತೆಯಿಲ್ಲ ಎಂದು ಆಯುಕ್ತರು ಸ್ಪಷ್ಟ ಪಡಿಸಿದ್ದಾರೆ.
ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದ್ದು, ಇದು ದೇಶದಲ್ಲೇ ಮೊದಲು. ನಗರದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರಿಗೆ ಪುನರ್ವಸತಿ ಕೂಡ ಕಲ್ಪಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.
ಮೀಟರ್ ಬಡ್ಡಿ ದಂಧೆ ನಡೆಸುವವರು ಬೆಳಗ್ಗೆ ವ್ಯಾಪಾರಿಗಳಿಗೆ ಹಣ ನೀಡಿ ಸಂಜೆ ಭಾರೀ ಬಡ್ಡಿ ಲೆಕ್ಕಾಚಾರದಲ್ಲಿ ವಾಪಾಸ್ ಪಡೆಯುತ್ತಾರೆ.












Click it and Unblock the Notifications