ಶಾಸಕರು ನನ್ನ ಜೊತೆ ಇದ್ದಾರೆ, ಬಿಎಸ್ ವೈ ಖುಷಿ

Felicitation to BS Yeddyurappa
ಶಿವಮೊಗ್ಗ, ಮಾ.31: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅಭಿನಂದಿಸುವ ನಮ್ಮಭಿಮಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಎರಡು ದಿನಗಳ ಕಾರ್ಯಕ್ರಮದ ಸಿದ್ಧತೆಯನ್ನು ವೀಕ್ಷಿಸಲು ಬಂದಿದ್ದ ಯಡಿಯೂರಪ್ಪ ಅವರು ನನಗೆ ಅಧಿಕಾರವಿಲ್ಲದಿದ್ದರೂ ಬಹುತೇಕ ಶಾಸಕರು ನನ್ನ ಜೊತೆ ಇದ್ದಾರೆ ಎಂದಿದ್ದಾರೆ.

ಜನರಿಗೆ ಪ್ರೀತಿ ವಿಶ್ವಾಸ ತೋರಿಸಿದರೆ ಸಾಕು ಅವರು ನಿಮ್ಮನ್ನು ಆದರದಿಂದ ಕಾಣುತ್ತಾರೆ. ಪಕ್ಷವನ್ನು ಕಟ್ಟಿ ಬೆಳೆಸಿದರೂ ಕಳೆದ 7 ತಿಂಗಳಿನಿಂದ ಅಧಿಕಾರದಿಂದ ವಂಚಿತವಾಗಿದ್ದೇನೆ. ಸಿಎಂ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ನಾನಾಗಿ ಹೈಕಮಾಂಡ್ ಬಳಿಗೆ ಮತ್ತೆ ಹೋಗುವುದಿಲ್ಲ, ಅವರು ಕರೆದರೆ ನೋಡೋಣ ಎಂದರು.

ನನಗೆ ಯಾವುದೇ ಶಕ್ತಿ ಪ್ರದರ್ಶನ ಮಾಡಿ ಯಾರನ್ನೋ ಮೆಚ್ಚಿಸುವ ಅಗತ್ಯವಿಲ್ಲ. ಜನರಿಗೆ ಯಡಿಯೂರಪ್ಪ ಏನು ಎಂಬುದು ತಿಳಿದಿದೆ ಎಂದು ಯಡಿಯೂರಪ್ಪ ಹೇಳಿದರು.

ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ರೂಪಿಸಿ, ಸಿದ್ಧತೆ ಉಸ್ತುವಾರಿಯಾಗಿರುವ ಆರ್ ಎಂ ಮಂಜುನಾಥಗೌಡ, ಉದ್ಯಮಿ ರುದ್ರೇಗೌಡರನ್ನು ಯಡಿಯೂರಪ್ಪ ಅಭಿನಂದಿಸಿದರು. ಯಡಿಯೂರಪ್ಪ ಅವರ ಜೊತೆ ಅವರ ಮಗ ಸಂಸದ ಬಿವೈ ರಾಘವೇಂದ್ರ ಕೂಡಾ ಇದ್ದರು.

ಬೆಂಗಳೂರಿನಲ್ಲಿ ನಡೆದಿರುವ ನಾರಿ ಶಕ್ತಿ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಿರುವ ಸಿಎಂ ಸದಾನಂದ ಗೌಡರು ಶಿವಮೊಗ್ಗದ ಬಿಎಸ್ ವೈ ಸನ್ಮಾನ ಕಾರ್ಯಕ್ರಮಕ್ಕೆ ಸದಾನಂದ ಗೌಡರು ಬರ್ತಾರಾ? ನಿರೀಕ್ಷಿಸಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+