ಮೆಟ್ರೋ ಇಂಜಿನಿಯರ್ ಅಪಹರಣ,ಪೊಲೀಸರಿಂದ ರಕ್ಷಣೆ

metro-engineer-kidnapped-rescued-by-police-bangalore
ಬೆಂಗಳೂರು, ಮಾ.29‌: ರಾಜಧಾನಿ ಬೆಂಗಳೂರು ಮತ್ತೊಮ್ಮೆ ಪಾತಕಿಗಳ ರಾಜಧಾನಿಯೂ ಆಗುವ ಹವಣಿಕೆಯಲ್ಲಿದೆ. ಕಳೆದೆರಡು ಮೂರು ದಿನಗಳಲ್ಲಿ ಅಪಹರಣ, ಹತ್ಯೆ, ಕೊಲೆ ಪ್ರಕರಣಗಳು ನಡೆದಿರುವ ಸಂದರ್ಭದಲ್ಲೇ ಮತ್ತೊಂದು ಅಪಹರಣ ಪ್ರಕರಣ ಪತ್ತೆಯಾಗಿದೆ.

ನಗರದ ಮಹತ್ವದ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋದ ಇಂಜಿನಿಯರ್ ಒಬ್ಬರನ್ನು ಬುಧವಾರ ರಾತ್ರಿ ಅಪಹರಿಸಲಾಗಿದೆ. ನಾಲ್ವರು ದುಷ್ಕರ್ಮಿಗಳಿಂದ ಈ ಕುಕೃತ್ಯ ನಡೆದಿದೆ. ಇಂಡಿಕಾ ಕಾರಿನಲ್ಲಿ ಇಂಜಿನಿಯರನನ್ನು ಅಪಹರಿಸಿದ್ದ ದುಷ್ಕರ್ಮಿಗಳು ಅವರನ್ನು ಮೇಲುಕೋಟೆಯತ್ತ ಕರೆದೊಯ್ಯುತ್ತಿದ್ದರು.

ಆದರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಈ ಅಪಹರಣ ಪ್ರಕರಣವನ್ನು ಬೇಧಿಸಿದ್ದು, ಮೆಟ್ರೋ ಇಂಜಿನಿಯರರನ್ನು ಅಪಾಯದಿಂದ ಪಾರುಮಾಡಿದ್ದಾರೆ. ಏನಾಯಿತೆಂದರೆ ಮೇಲುಕೋಟೆ ಮಾರ್ಗ ಮಧ್ಯೆ ಪೊಲೀಸರು ನಾಕಾಬಂದಿ ನಡೆಸುತ್ತಿದ್ದರು. ಆಗ ಇಂಡಿಕಾ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಅನುಮಾನ ಬಂದು ಹೆಚ್ಚು ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರನ್ನು ಆ ಕಾರಿನಲ್ಲಿ ಅಪಹರಣ ಮಾಡುತ್ತಿರುವುದು ಅರಿವಿಗೆ ಬಂದಿದೆ.

ಈ ಮಧ್ಯೆ ನಾಲ್ವರ ಪೈಕಿ ಮೂವರು ಅಪಹರಣಕಾರರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಆದರೆ ಪೊಲೀಸರು ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾಗಿದ್ದ ಮೆಟ್ರೋದ ಇಂಜಿನಿಯರ್ ಈಗ ಸುರಕ್ಷಿತವಾಗಿ ಪೊಲೀಸರ ವಶದಲ್ಲಿದ್ದಾರೆ. ಅಪಹರಣದ ಉದ್ದೇಶ ತಿಳಿದುಬಂದಿಲ್ಲ. ಹೆಚ್ಚಿನ ವಿವರಕ್ಕಾಗಿ ಕಾಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+