ತೆರಿಗೆ ಕಟ್ಟೋಕೆ ನಾವು,ನಮಗ್ಯಾಕ್ರೀ ಅನ್ಯಾಯ ಮಾಡ್ತೀರಾ
ಬೆಂಗಳೂರು,
ಮಾ 29: ತೆರಿಗೆ ಪಾವತಿಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ, ವಿದ್ಯುತ್ ಬಾಕಿ ಪಾವತಿ ವಿಷಯದಲ್ಲೂ ನಾವು ಉಡುಪಿ, ದಕ್ಷಿಣಕನ್ನಡ ಜಿಲ್ಲೆಯವರು ಮೊದಲ ಸ್ಥಾನದಲ್ಲಿದ್ದೇವೆ. ಆದರೆ ಸೂಕ್ತ ಸವಲತ್ತು ನೀಡುವಲ್ಲಿ ಯಾಕೆ ನಮಗೆ ಅನ್ಯಾಯ ಮಾಡುತ್ತಿದ್ದೀರಾ ಎಂದು ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ತಮ್ಮದೇ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ( ಮಾ 28) ವಿಧಾನಪರಿಷತ್ ನಲ್ಲಿ ನಡೆದಿದೆ. id="toptextpromo">ಈ
ಅವಳಿ ಜಿಲ್ಲೆಗಳ ಅಭಿವೃದ್ದಿ ಯೋಜನೆಗಳ ಅನುಷ್ಠಾನ ಅಂತಿಮ ಹಂತದಲ್ಲಿದೆ. ಅಂತಿಮ ಕಂತಿನ ಹಣ ಬಿಡುಗಡೆ ಮಾಡಬೇಕೆಂದರೆ ನಮ್ಮ ಜಿಲ್ಲೆಗಳು ನಂಜುಂಡಪ್ಪ ವರದಿಯ ವ್ಯಾಪ್ತಿಗೆ ಬರುವುದಿಲ್ಲ, ವರದಿ ಶಿಫಾರಸು ಮಾಡಿದ ತಾಲೂಕುಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡುತ್ತಾರೆ. ನಮ್ಮ ಅಭಿವೃದ್ದಿ ಕಾರ್ಯಕ್ರಮಗಳಿಗೆ ನಂಜುಡಪ್ಪ ವರದಿ ಅಡ್ಡಿಯನ್ನುಂಟು ಮಾಡುತ್ತಿದೆ ಎನ್ನುವ ಅಭಿಪ್ರಾಯ ಮೂಡುತ್ತಿದೆ ಎಂದು ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಮ್ಮ
ಜಿಲ್ಲೆಗಳಿಗೆ ನ್ಯಾಯ ನಿರಾಕರಣೆ ಮಾಡುವುದು ಸರಿಯಲ್ಲ. ನಂಜುಡಪ್ಪ ವರದಿಯ ಶಿಫಾರಸುಗಳಂತೆ ಅಭಿವೃದ್ದಿಗೆ ಪೂರಕ ವಾತವರಣ ನಿರ್ಮಾಣ ಆಗಲಿ ಎನ್ನುವುದು ನನ್ನ ಅಭಿಪ್ರಾಯ. ಬೇರೆ ತಾಲೂಕು ಅಭಿವೃದ್ದಿಗಳಿಗೆ ಹಣ ಬಿಡುಗಡೆ ಮಾಡಬಾರದು ಎನ್ನುವುದು ನನ್ನ ಮಾತಿನ ಅರ್ಥವಲ್ಲ. ನಮ್ಮ ಭಾಗದ ಜನರಿಗೆ ನ್ಯಾಯ ಸಿಗಬೇಕೆನ್ನುವುದು ನನ್ನ ವಾದ ಎಂದು ಶ್ರೀನಿವಾಸ ಪೂಜಾರಿ ಸರಕಾರವನ್ನು ಕೇಳಿಕೊಂಡಿದ್ದಾರೆ.











Click it and Unblock the Notifications