ಬೆಂಗಳೂರಿಗೆ ಭಾರತದ ಅತ್ಯಂತ ದುಬಾರಿ ನಗರಿ ಬಿರುದು

Bangalore costliest city in India
ಬೆಂಗಳೂರು, ಮಾ. 28 : ಪೆಟ್ರೋಲ್ ದುಬಾರಿ, ಕರೆಂಟು ದುಬಾರಿ, ತರಕಾರಿ ದುಬಾರಿ, ಬಟ್ಟೆಬರೆ ದುಬಾರಿ, ಮನೆ ಬಾಡಿಗೆ ದುಬಾರಿ, ಶಿಕ್ಷಣ ದುಬಾರಿ, ಪ್ರಯಾಣಿಸುವುದು ದುಬಾರಿ, ಹೋಟೆಲ್ ತಿಂಡಿ ದುಬಾರಿ, ಎಲ್‌ಪಿಜಿ ಸಿಲಿಂಡರ್ ದುಬಾರಿ! ದುಬಾರಿ ವಸ್ತುಗಳ ಪಟ್ಟಿಯೇ ಇಷ್ಟೊಂದು ಉದ್ದಿರಬೇಕಾದರೆ ಇಡೀ ನಗರ ದುಬಾರಿ ಹಣೆಪಟ್ಟಿ ಅಂಟಿಸಿಕೊಳ್ಳದಿದ್ದರೆ ಹೇಗೆ?

ಐಟಿ ಸಿಟಿ, ಉದ್ಯಾನ ನಗರಿ, ಏರ್ ಕಂಡಿಷನ್ ಸಿಟಿ, ನಿವೃತ್ತರ ಸ್ವರ್ಗ ಎಂಬಿತ್ಯಾದಿ ಬಿರುದು ಬಾವಲಿಗಳನ್ನು ಪಡೆದುಕೊಂಡಿದ್ದ ನಮ್ಮ ಬೆಂಗಳೂರಿಗೆ ಮತ್ತೊಂದು ಗರಿ ದೊರೆತಿದೆ. ಅದು, ಭಾರತದಲ್ಲಿಯೇ ಅತ್ಯಂತ ದುಬಾರಿ ನಗರ ಎಂಬ ಬಿರುದು. ಬೆಂಗಳೂರಿಗೆ ಇದು ಅರ್ಹವಾದ ಬಿರುದೇ ಸರಿ. ಇದು ಸಾಬೀತಾಗಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕನ್ಯೂಮರ್ ಪ್ರೈಸ್ ಇಂಡೆಕ್ಸ್ ಪ್ರಕಾರ.

ಯಾವ್ಯಾವ ನಗರಗಳಲ್ಲಿ ಯಾವ್ಯಾವ ಪದಾರ್ಥಗಳು ತುಟ್ಟಿಯಾಗಿವೆ ಎಂಬುದನ್ನು ತುಲನೆ ಮಾಡಿ ಯಾವ ನಗರ ದುಬಾರಿ, ಯಾವ ನಗರ ಸೋವಿ ಎಂಬುದನ್ನು ಕನ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ನಿರ್ಧರಿಸುತ್ತದೆ. ಇದರ ಪ್ರಕಾರ, ಬೆಂಗಳೂರು ಪ್ರಥಮ ಸ್ಥಾನದಲ್ಲಿ ವಿರಾಜಮಾನವಾಗಿದ್ದರೆ, ದೆಹಲಿ ಕಡೆಯ ಸ್ಥಾನ ಪಡೆದಿದೆ.

ಉದಾಹರಣೆಗೆ ಯಾವ ನಗರದಲ್ಲಿ 14.5 ಕಿ.ಗ್ರಾಂ. ಎಲ್‌ಪಿಜಿ ಸಿಲಿಂಡರ್ ದರ ಎಷ್ಟಿದೆಯೆಂದು ನೋಡಿ. ಬೆಂಗಳೂರಿನಲ್ಲಿ ರು.415, ಕೋಲ್ಕತಾ ರು.405, ಮುಂಬೈ ರು.402, ದೆಹಲಿ ರು.399, ಚೆನ್ನೈ ರು.393.50. ಸತತವಾಗಿ ಏರುತ್ತಿರುವ ಬೆಲೆಗಳು ಬೆಂಗಳೂರನ್ನು ದುಬಾರಿ ನಗರಿಯನ್ನಾಗಿಸಿವೆ. ಇದೆಲ್ಲದರ ಪರಿಣಾಮ ಬೆಂಗಳೂರು ಐಟಿ ಚಟುವಟಿಕೆಯ ಕೇಂದ್ರವಾಗಿರುವುದು.

ಕೆಲ ದಿನಗಳ ಹಿಂದೆ ಜಾಗತಿಕ ಮಾನವ ಸಂಪನ್ಮೂಲ ಸಂಸ್ಥೆ ಮರ್ಸರ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ, ವಾಸಿಸಲು ಬೆಂಗಳೂರು ನಗರ ಭಾರತದಲ್ಲಿಯೇ ಅತ್ಯುತ್ತಮ ನಗರ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಈಗ ಅತ್ಯಂತ ದುಬಾರಿ ನಗರ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದೆ. ದುಡ್ಡಿದ್ದೋರು ಮಾತ್ರ ಬೆಂಗಳೂರಿನಲ್ಲಿ ದೊಡ್ಡಪ್ಪನಾಗಲು ಸಾಧ್ಯ.

ನಿಮ್ಮ ಸಲಹೆಗಳೇನು? : ಅದು ದುಬಾರಿ, ಇದು ತುಟ್ಟಿ ಎಂದು ಹಲುಬಿಕೊಂಡು ಕೂಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ದುಬಾರಿ ಸಮಾಜದಲ್ಲಿ ಇದ್ದುಕೊಂಡೇ ಹಾಸಿಗೆ ಇದ್ದಷ್ಟು ಕಾಲು ಚಾಚುವಂತೆ ಬದುಕುವ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಹಣ ಉಳಿಸುವುದು ಹೇಗೆ? ತುಟ್ಟಿ ಜಮಾನಾದಲ್ಲಿಯೇ ಜೀವನವನ್ನು ಸಹ್ಯವಾಗಿಸಿಕೊಳ್ಳುವದು ಹೇಗೆ? ನಿಮ್ಮ ಸಲಹೆಗಳನ್ನು ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+