ಕಪ್ಪು ಹಣ ಕೇಸ್: HSBC ಬ್ಯಾಂಕಿಗೆ ಕುತ್ತು

ಜಿನಿವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ 700 ಜನರ ಹೆಸರಿನ ಪಟ್ಟಿಯನ್ನು ಭಾರತಕ್ಕೆ ಫ್ರಾನ್ಸ್ ಸರ್ಕಾರ ಸಲ್ಲಿಸಿದೆ. ಈ ಸಂಬಂಧ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಆದಾಯ ತೆರಿಗೆ ಇಲಾಖೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯನ್ನು ಸಂಪರ್ಕಿಸಿ ಮಾತುಕತೆ ನಡೆಸಿದೆ.
ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ಬ್ಯಾಂಕ್ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಸಿಬಿಡಿಟಿ ಶಿಫಾರಸು ಅಗತ್ಯವಿದೆ.
ಈ ಸಂಬಂಧ ಸಿಬಿಡಿಟಿ ಕಾನೂನು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಅಭಿಪ್ರಾಯ ಪಡೆಯಲು ಐಟಿ ಇಲಾಖೆ ಪತ್ರ ಬರೆದಿದೆ. ಸಿಬಿಡಿಟಿ ಅನುಮತಿ ಸಿಕ್ಕ ನಂತರ ಎಚ್ಎಸ್ ಬಿಸಿ ಬ್ಯಾಂಕ್ ಹಾಗೂ ಪಟ್ಟಿಯಲ್ಲಿರುವ ಇತರೆ ವ್ಯಕ್ತಿಗಳ ಮೇಲೆ ಕಾನೂನು ಹೋರಾಟಕ್ಕೆ ಆದಾಯ ತೆರಿಗೆ ಇಲಾಖೆ ಇಳಿಯಲಿದೆ.(ಪಿಟಿಐ)












Click it and Unblock the Notifications