ಉದ್ಯೋಗ ಖಾತ್ರಿ: ಖುಲಾಯಿಸಿತು ಒಂದಷ್ಟು ಅದೃಷ್ಟ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ತುಸು ಧಾರಾಳಿಯಾಗಿ ಕೋರ್ಟ್ ಹೇಳಿದ್ದಕ್ಕಿಂತ 9 ರುಪಾಯಿ ಹೆಚ್ಚು ವೇತನ ನೀಡಲು ಒಪ್ಪಿಕೊಂಡಿದ್ದಾರೆ. ಆದರೆ ಇತರೆ ರಾಜ್ಯಗಳಲ್ಲಿ ಈ ವೇತನ ಕೇವಲ 100 ರುಪಾಯಿಗೆ ನಿಗದಿಪಡಿಸಲಾಗಿದೆ.
ಹಿನ್ನೆಲೆ: ಯೋಜನೆಯಡಿ ಕನಿಷ್ಠ ವೇತನವನ್ನು ಪರಿಷ್ಕರಿಸುವಂತೆ ರಾಜ್ಯ ಹೈಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ 23ರಂದು ತೀರ್ಪು ನೀಡಿತ್ತು. ಆದರೆ ಕೇಂದ್ರ ಸರ್ಕಾರ 125 ರೂ.ಗಿಂತ ಹೆಚ್ಚು ನೀಡಲಾಗದು ಎಂದು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ವ್ಯಾಜ್ಯ ಕೋರ್ಟಿನಲ್ಲಿ ಇನ್ನೂ ನಡೆಯುತ್ತಿದ್ದು, ಅಂತಿಮ ತೀರ್ಪಿಗೆ ಅನುಗುಣವಾಗಿ ಹೊಸ ಅಧಿಸೂಚನೆ ಜಾರಿಯಾಗಲಿದೆ. ಏ. 9ರಂದು ಈ ಬಗ್ಗೆ ವಿಚಾರಣೆ ಇದೆ.
ರಾಜ್ಯದ ಕನಿಷ್ಠ ವೇತನಕ್ಕೆ ಸಮಾನವಾಗಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕನಿಷ್ಠ ವೇತನವೂ ಇರಬೇಕೆಂದು ನ್ಯಾಯಾಲಯ ಹೇಳಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಜನವರಿಯಲ್ಲಿ ಎತ್ತಿ ಹಿಡಿದಿದೆ. ರಾಜ್ಯದಲ್ಲಿ ಕನಿಷ್ಠ ವೇತನ ರೂ.146 ರೂಪಾಯಿ ಇದೆ. ಇದರಿಂದಾಗಿ ಯೋಜನೆಯ ಕನಿಷ್ಠ ವೇತನ ರೂ.155ಕ್ಕೆ ಹೆಚ್ಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಲೋಕಸಭೆಗೆ ನಿನ್ನೆ ತಿಳಿಸಿದರು.












Click it and Unblock the Notifications