ದಾವೂದ್ ಬಳಿ ಇದೆ 20 ನಕಲಿ ಪಾಸ್ ಪೋರ್ಟ್

Dawood Ibrahim Fake Passports
ಮುಂಬೈ, ಮಾ.27: ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಬಳಿ ಸುಮಾರು 20 ನಕಲಿ ಪಾಸ್ ಪೋರ್ಟ್ ಗಳಿದೆ ಎಂದು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

20 ನಕಲಿ ಪಾಸ್ ಪೋರ್ಟ್ ಗಳಲ್ಲಿ 8 ಪಾಸ್ ಪೋರ್ಟ್ ಗಳನ್ನು ಮುಂಬೈನಿಂದ ಪಡೆಯಲಾಗಿದೆ. ಭಾರತದ ಅಧಿಕಾರಿಗಳ ಸಹಾಯದಿಂದ ದಾವೂದ್ ಆರಾಮವಾಗಿ ಗಡಿ ದಾಟುತ್ತಿದ್ದ ಎಂಬ ಮಾಹಿತಿ ಹೊರ ಹಾಕಲಾಗಿದೆ.

ಭೂಗತ ಪಾತಕಿ ಛೋಟಾ ರಾಜನ್ ಬಳಿ 8 ಪಾಸ್ ಪೋರ್ಟ್ ಹಾಗೂ ದಾವೂದ್ ನ ಸೇನಾನಿ ಛೋಟಾ ಶಕೀಲ್ ಬಳಿ 6 ನಕಲಿ ಪಾಸ್ ಪೋರ್ಟ್ ಗಳಿದೆ ಎನ್ನಲಾಗಿದೆ.

ಡಿ ಕಂಪನಿಯ ಟಗರ್ ಮೊಮನ್, ಅಯೂಬ್ ಮೆಮೊನ್, ಅಲಿ ಮೂಸಾ ಮತ್ತು ಪಠಾನ್ ಇಜಾಜ್ ಬಳಿ ಕೂಡಾ ಭಾರತ ಮತ್ತು ಪಾಕಿಸ್ತಾನಿ ಪಾಸ್ ಪೋರ್ಟ್ ಗಳಿದೆ.

ಡಿ ಕಂಪನಿ ಬಳಿ ನಕಲಿ ಪಾಸ್ ಪೋರ್ಟ್ ಗಳಿರುವುದು ಆತಂಕಕಾರಿ ವಿಷಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಎಟಿಎಸ್ ಡಿಜಿಪಿ ರಾಕೇಸ್ ಮಾರಿಯಾ ಹೇಳಿದ್ದಾರೆ.

ಮಂಡಿ ಕಟ್: ಇದು ಅತ್ಯಂತ ಜನಪ್ರಿಯ ವಿಧಾನ. ಕದ್ದಿರುವಅಸಲಿ ಪಾಸ್ ಪೋರ್ಟ್ ನ ಭಾವಚಿತ್ರವನ್ನು ಕತ್ತರಿಸಿ ಡಾನ್ ಗಳ ಸುಂದರ ಚಿತ್ರವನ್ನು ಅಂಟಿಸಲಾಗುವುದು. ಈ ಮೂಲಕ ಅಸಲಿ ಯಾವುದು, ನಕಲಿ ಯಾವುದು ಎಂದು ತಿಳಿಯದಂತೆ ಮಾಡಲಾಗುತ್ತದೆ.

ಇನ್ನೊಂದು ವಿಧಾನ ಪ್ರಕಾರ ನಕಲಿ ದಾಖಲೆಗಳನ್ನು ನೀಡಿ, ಅಸಲಿ ಪಾಸ್ ಪೋರ್ಟ್ ಪಡೆಯಲಾಗುತ್ತದೆ. ಇನ್ನು ಕೆಲವರು ಅಧಿಕಾರಿಗಳ ಕೈ ಬಿಸಿ ಮಾಡಿ, ತಪಾಸಣೆ ಸಮಯದಲ್ಲಿ ಕಣ್ತತ್ತಪ್ಪಿಸಿ ಪಾಸ್ ಪೋರ್ಟ್ ಪಡೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+