ಕುಡುಕ ತನ್ನ ಗೆಳೆಯನನ್ನೇ ಇರಿದು ಕೊಂದ

ಕುಡಿದಾಗ ಎಲ್ಲವೂ ಮರೆತು ಹೋಗುತ್ತದೆ ಎನ್ನುತ್ತಾರೆ. ಆದರೆ, ಆರೋಪಿ ವೆಂಕಟೇಶ ಮಾತ್ರ ಗೆಳೆಯ ರಾಮುವನ್ನು ಕೊಂದಿದ್ದು ಸಾಲ ತೀರಸಲಿಲ್ಲ ಎಂಬ ಕಾರಣಕ್ಕೆ ಎಂದು ತಿಳಿದು ಬಂದಿದೆ.
ಬಿಟಿಎಂ ಲೇಔಟ್‌ನ ಬಾರ್ ವೊಂದರಲ್ಲಿ ಕೊಲೆಯಾದ ವ್ಯಕ್ತಿ ಬಿಟಿಎಂ ಲೇಔಟ್‌ನ ನಿವಾಸಿ ಆಟೋರಿಕ್ಷಾ ಚಾಲಕ ರಾಮು (28) ಹಾಗೂ ವೆಂಕಟೇಶ್ ಇಬ್ಬರು ಯುಗಾದಿ ನಂತರದ ಸಂಭ್ರಮವನ್ನು ಆಚರಿಸುತ್ತಿದ್ದರು.
ಕೆಲವು ರೌಂಡ್ ಡ್ರಿಂಕ್ಸ್ ನಂತರ ಸಾಲದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ವೆಂಕಟೇಶ್ ರಾಮುವಿನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ರಾಮು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ವೆಂಕಟೇಶ್‌ನನ್ನು ಬಂಧಿಸಿರುವ ಮಡಿವಾಳ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications