ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ

By Prasad
|
Google Oneindia Kannada News

God, hope the papers will not leak again
ಬೆಂಗಳೂರು, ಮಾ. 24 : 2012ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕಾಗಿರುವ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿ ಸಂಪೂರ್ಣ ಪರಿಷ್ಕರಣೆ ಮಾಡಿದ್ದು, ಹೊಸ ವೇಳಾಪಟ್ಟಿಯನ್ನು ಇಲಾಖೆಯ ಆಯುಕ್ತರು ಬಿಡುಗಡೆ ಮಾಡಿದ್ದಾರೆ. ಅದರ ವಿವರಗಳು ಕೆಳಗಿನಂತಿವೆ. ಇದರ ಪ್ರಕಾರ ಮಾರ್ಚ್ 24ರಿಂದ ಪರೀಕ್ಷೆಗಳು ಪ್ರಾರಂಭವಾಗಿ ಏಪ್ರಿಲ್ 5ರಂದು ಕೊನೆಗೊಳ್ಳಲಿವೆ.

ಎರಡನೇ ಪಿಯುಸಿ ಪರೀಕ್ಷೆಯ ಗಣಿತ, ಭೌತಶಾಸ್ತ್ರ ಪತ್ರಿಕೆಗಳು ಬಹಿರಂಗವಾಗಿ ವಿದ್ಯಾರ್ಥಿಗಳಿಗೆ ಅಗಣಿತ ತೊಂದರೆಗಳನ್ನು ನೀಡಿದ್ದು, ಭೌತಿಕವಾಗಿ ಮತ್ತು ಮಾನಸಿಕವಾಗಿ ತೊಳಲಾಡುವಂತೆ ಮಾಡಿವೆ. ದುಡ್ಡಿನ ಆಸೆಗಾಗಿ ಕೋಲಾರದ ಕೆಲ ದುರುಳ ಶಿಕ್ಷಕರು ಸೇರಿದಂತೆ ಕೆಲ ದುಷ್ಕರ್ಮಿಗಳು 5,96,739 ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ.

ಮಾರ್ಚ್ 15ರಿಂದ ಆರಂಭವಾಗಿ ಮಾರ್ಚ್ 30ರೊಳಗಾಗಿ ಎಲ್ಲ ಪರೀಕ್ಷೆಗಳು ಮುಗಿಯಬೇಕಾಗಿತ್ತು. ಆದರೆ, ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿ ವಿದ್ಯಾರ್ಥಿಗಳನ್ನು ತೊಂದರೆಗೆ ಸಿಲುಕಿಸಿವೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಗರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದಾಗಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ದಿನಾಂಕ ಸಮಯ ವಿಷಯ
ಮಾ. 24 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಐಚ್ಚಿಕ ಕನ್ನಡ, ಸಂಖ್ಯಾಶಾಸ್ತ್ರ, ಹಾಗೂ ಗೃಹ ವಿಜ್ಞಾನ
ಮಾ. 27 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಭೌತಶಾಸ್ತ್ರ, ತರ್ಕಶಾಸ್ತ್ರ ಹಾಗೂ ಶಿಕ್ಷಣ
ಮಾ. 28 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಕನ್ನಡ, ತಮಿಳು, ಮಳಯಾಳಂ ಹಾಗೂ ಅರೇಬಿಕ್
ಮಾ. 29 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಇಂಗ್ಲಿಷ್
ಮಾ. 30 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಮರಾಠಿ, ಉರ್ದು ಹಾಗೂ ಫ್ರೆಂಚ್
ಮಾ. 31 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್
ಏ. 3 ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಗಣಿತ
ಏ. 5 ಮಧ್ಯಾಹ್ನ 2ರಿಂದ ಸಂಜೆ 5.15 ಹಿಂದಿ, ತೆಲುಗು ಹಾಗೂ ಸಂಸ್ಕೃತ
English summary
Karnataka pre-university Board has announced revised time table for the 2nd PUC examination, starting from March 24, ending on April 5. Few papers including Mathematics and Physics were leaked inviting the ire of students and parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X