ಲಜ್ಜೆಗೇಡಿ ಯಡಿಯೂರಪ್ಪನ ಕಾಶಿ ತ್ಯಾಗ

ನಗರದಲ್ಲಿ ಮೊನ್ನೆ ಶಾಂತವೇರಿ ಗೋಪಾಲ ಗೌಡರ ಬಳಗದ ವತಿಯಿಂದ ನಡೆದ 'ಜೀವಂತ ಜ್ವಾಲಾಮುಖಿ" ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಅವರು ಯಡಿಯೂರಪ್ಪ ಬಗ್ಗೆ ಈ ವ್ಯಾಖ್ಯಾನ ಮಾಡಿದರು.
'ನಾನು ಕೂಡ ಮೊದಲು ಬಿಜೆಪಿ ಮತ್ತು ಆರೆಸ್ಸೆಸ್‌ನಲ್ಲಿ ಸಕ್ರಿಯನಾಗಿದ್ದೆ. ಆದರೆ, ಆಗಿನಿಂದಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಒಂದು ವೇಳೆ ಈಗಲೂ ಕೂಡ ನಾನು ಬಿಜೆಪಿಯಲ್ಲಿದ್ದಿದ್ದರೆ ನನ್ನನ್ನು ಇವರು ಭ್ರಷ್ಟನನ್ನಾಗಿ ಮಾಡಿ ಬಿಡುತ್ತಿದ್ದರು' ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾಶಿ ತ್ಯಾಗ: 'ಎಲ್ಲರೂ ತಮ್ಮಲ್ಲಿರುವುದನ್ನು ತ್ಯಾಗ ಮಾಡಲು ಕಾಶಿ ಯಾತ್ರೆ ಕೈಗೊಳ್ಳುತ್ತಾರೆ. ಆದರೆ, ಯಡಿಯೂರಪ್ಪ ತಾವು ತಪ್ಪು ಮಾಡಿ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಲು ಮತ್ತು ದೇವರನ್ನು ತಮ್ಮ ಭ್ರಷ್ಟಾಚಾರದಲ್ಲಿ ಪಾಲುದಾರನಾಗಿ ಮಾಡಲು ಕಾಶಿಗೆ ಹೋಗಿ ಬಂದಿದ್ದಾರೆ. ಅವರ ಬಗ್ಗೆ ಜನರೇ ನಿರ್ಧರಿಸಬೇಕು' ಎಂದು ಸುಬ್ಬಯ್ಯ ತಿಳಿಸಿದರು.












Click it and Unblock the Notifications