ಗೋವಿಂದಾ! ನನ್ನದು ತಿಮ್ಮಪ್ಪನ ಬಣ: ಕೃಷ್ಣಯ್ಯ ಶೆಟ್ಟಿ
ಬೆಂಗಳೂರು,
ಮಾ.21: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿಎಂ ಕುರ್ಚಿಗಾಗಿ ನಡೆಸಿರುವ ಹೋರಾಟ ನಾನಾ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಟ್ಟಿದೆ. ಜತೆಗೆ ಯಡಿಯೂರಪ್ಪ ಕಟ್ಟಾ ಬೆಂಬಲಿಗರಿಗೂ ಅದು ಇರುಸುಮುರುಸು ತಂದಿರುವುದು ಕುತೂಹಲಕಾರಿಯಾಗಿದೆ. id="toptextpromo">ಇದೇ
ಯಡಿಯೂರಪ್ಪಗೆ ಜೈಲುಮೇಟ್ ಸಹ ಆಗಿದ್ದ ಸನ್ಮಾನ್ಯ ಕೃಷ್ಣಯ್ಯ ಶೆಟ್ಟಿ ಅವರು ನಮೋ ಏಡು ಕೊಂಡಲವಾಡ ಅಂತ ಯಡಿಯೂರಪ್ಪ ಅವರನ್ನು ಪಕ್ಕಕ್ಕಿಟ್ಟು ತಿಮ್ಮಪ್ಪನಲ್ಲಿ ಅಖಂಡ ನಿಷ್ಠೆ ತೋರಿದ್ದಾರೆ. ಹೇಳಿ ಕೇಳಿ ಮುಜರಾಯಿ ಇಲಾಖೆಯ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ತಿಮ್ಮಪ್ಪನ ಅಪಾರ ಭಕ್ತರು ಎಂಬುದು ಮಾಲೂರಿನ ಗಲ್ಲಿಗಲ್ಲಿಗೂ ತಿಳಿದ ವಿಷಯ. ಇಂತಿಪ್ಪ ಕೃಷ್ಣಯ್ಯ ಶೆಟ್ಟಿ ಇದೇ ಮಾಲೂರಿನ ಜನತೆಗೆ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವುದೂ ಲೋಕವಿಧಿತ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ ಏನಾಗಿದೆಯೆಂದರೆ 'ಯಡಿಯೂರಪ್ಪ ಖುರ್ಚಿಗಾಗಿ ನಡೆಸುತ್ತಿರುವ ಮಂಗನಾಟದ ಬಗ್ಗೆ ಏನನ್ನುತ್ತೀರಿ?' ಎಂದು ಕೃಷ್ಣಯ್ಯ ಶೆಟ್ಟಿಯನ್ನು ಕೇಳಿದ್ದೇ ತಡ... ಏಡು ಕೊಂಡಲವಾಡ ಅಂತ ರಾಗವಾಗಿ ಹಾಡತೊಡಗಿದ್ದಾರೆ. ಮೊನ್ನೆ ಶಿವರಾತ್ರಿ ದಿನ ಇಂದಿನ (ನಾಳೆಗೆ ಯಾರೋ ಗೊತ್ತಿಲ್ಲ!?) ಮುಖ್ಯಮಂತ್ರಿ ಸದಾನಂದಗೌಡರಿಂದ ಗಂಗಾಜಲ ಹರಿಸಿದ್ದ ಶೆಟ್ಟಿ, 'ನಾನು ಯಾವುದೇ ಬಣದೊಂದಿಗೂ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಬದಲಿಗೆ ನಾನು ನಂಬಿರುವ ದೈವ ತಿರುಪತಿ ತಿಮ್ಮಪ್ಪನ ಬಣದಲ್ಲಿ ಶಾಶ್ವತವಾಗಿ ಉಳಿಯುವೆ' ಎಂದು ಮತ್ತೊಮ್ಮೆ ಸಾಷ್ಟಾಂಗ ಹಾಕಿದ್ದಾರೆ. ಗೋವಿಂದಾ ಗೋವಿಂದಾ !!!











Click it and Unblock the Notifications