ಆದಿಚುಂಚನಗಿರಿ ಶ್ರೀ ಹೇಳಿಕೆಗೆ ಸಂಸದ ಅಂಗಡಿ ಬೇಸರ

ಸದಾನಂದ ಗೌಡರನ್ನು ಜಾತಿ ವಿಷಯಕ್ಕಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಾರೂ ಯತ್ನಿಸುತ್ತಿಲ್ಲ. ಲಿಂಗಾಯತರು ಜಾತಿ ರಾಜಕೀಯ ಮಾಡುವುದಿಲ್ಲ. ಜಾತಿವಾದಿಯಿಂದ ನಾವು ದೂರವೇ ಉಳಿದಿದ್ದೇವೆ. ಒಕ್ಕಲಿಗರನ್ನು ಒಡೆಯಲು ಯತ್ನಿಸಿಲ್ಲ.
ಡಿವಿಎಸ್ ರನ್ನು ಸಿಎಂ ಮಾಡಿದ್ದು ಒಕ್ಕಲಿಗರಲ್ಲ. ದೇವೇಗೌಡ, ಕುಮಾರಸ್ವಾಮಿ ಅಲ್ಲ ಎಂಬುದು ನೆನಪಿರಲಿ.
ಹೈಕಮಾಂಡ್ ನೀಡಿದ್ದ ಭರವಸೆಯಂತೆ ಯಡಿಯೂರಪ್ಪ ಅವರಿಗೆ ನೀಡಬೇಕಿರುವ ಸ್ಥಾನಕ್ಕಾಗಿ ಆಗ್ರಹಿಸುತ್ತಿದ್ದೇವೆ ಅಷ್ಟೇ. ಯಡಿಯೂರಪ್ಪ ಅವರು ಆರೋಪ ಮುಕ್ತ ರಾಗಿದ್ದಾರೆ. ಇದರಲ್ಲಿ ಜಾತಿ ರಾಜಕೀಯ ಎಲ್ಲಿಂದ ಬಂತು ಎಂದು ಸುರೇಶ್ ಅಂಗಡಿ ಶ್ರೀಗಳನ್ನು ಪ್ರಶ್ನಿಸಿದ್ದಾರೆ.












Click it and Unblock the Notifications