ಮಹಿಳಾ ನೌಕರರನ್ನು 'ಸೆಕ್ಸಿ,ಬಿಚ್' ಎನ್ನಬೇಡಿ, ಹೈಕೋರ್ಟ್

ಪುರುಷ ಸಹದ್ಯೋಗಿಗಳು ಮಹಿಳಾ ನೌಕರರನ್ನು ಅಡ್ಡ ಹೆಸರಿನಿಂದ ಕರೆಯುವುದು ಲೈಗಿಂಕ ಕಿರುಕುಳದ ವಾಖ್ಯಾನದಲ್ಲಿ ಬರುತ್ತದೆ. ಮಹಿಳೆಯನ್ನು ಸೆಕ್ಸಿ ಎಂದು ಕರೆದರೆ ಅದು ಕಿರುಕುಳ ಅಥವಾ ಚುಡಾವಣೆಯಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಹೇಳಿಕೆ ನೀಡಿರುವುದರಿಂದ ಅವರೀಗ ಟೀಕೆಯ ಸುರಿಮಳೆಯನ್ನೇ ಎದುರಿಸುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ.
ನಗರದ ಎಗ್ಮೋರ್ ನಲ್ಲಿರುವ ಡಾನ್ ಬಾಸ್ಕೋ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿಯರು ಮತ್ತು ಪೋಷಕರು ಪುರುಷ ಶಿಕ್ಷಕ ಥರ್ಮನ್ ಫೆರ್ನಾಂಡಿಸ್ ವಿರುದ್ದ ಈ ಸಂಬಂಧ ದೂರು ದಾಖಲಿಸಿದ್ದರು.
ಈ ಶಿಕ್ಷಕನನ್ನು ಈಗಾಗಲೇ ಅಮಾನತಿನಲ್ಲಿ ಇಡಲಾಗಿದೆ. ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂಚಿಗಳಂತೆ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ಈಗ ಮದರಾಸು ಹೈಕೋರ್ಟ್ ಆದೇಶದಂತೆ ತನಿಖೆ ಕೈಗೊಳ್ಳಲು ಮುಂದಾಗಿದೆ.












Click it and Unblock the Notifications