ಪ್ರೇಕ್ಷಣೀಯ ಸ್ಥಳ : ಗೋಲ್ಡನ್ ಪಾಮ್ಸ್ ರೆಸಾರ್ಟ್

Golden Palms Spa and Resort, Bangalore
ಬೆಂಗಳೂರು, ಮಾ. 19 : ದೇಶದ ಅತ್ಯುತ್ತಮ ರೆಸಾರ್ಟ್‌ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೋಲ್ಡನ್ ಪಾಮ್ಸ್ ಹೊಟೇಲ್ ಮತ್ತು ಸ್ಪಾ ಸದ್ಯಕ್ಕೆ ಕರ್ನಾಟಕದ ಹದಗೆಟ್ಟ ರಾಜಕಾರಣದ ಕೇಂದ್ರಬಿಂದುವಾಗಿದೆ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಕಾಲಕೆಳಗಿನ ಚಾಪೆಯನ್ನು ಎಳೆದು, ಯಡಿಯೂರಪ್ಪನವರಿಗೆ ಪಟ್ಟಾಭಿಷೇಕ ಮಾಡಲು ಸುಮಾರು 70 ಶಾಸಕರು ಬೀಡುಬಿಟ್ಟಿರುವುದು ಈ ರೆಸಾರ್ಟಿನಲ್ಲೇ.

ಇಂಥದೊಂದು ಅಸಹ್ಯಕರ ಬೆಳವಣಿಗೆಗೆ ಪಂಚತಾರಾ ಹೋಟೆಲ್ ಗೋಲ್ಡನ್ ಪಾಮ್ಸ್ ರೆಸಾರ್ಟ್ ಸಾಕ್ಷಿಯಾಗಬೇಕಿತ್ತಾ ಎಂಬುದು ಪ್ರಶ್ನೆ. ಇಂಥ ಘಟನೆಗೆ ಸಾಕ್ಷಿಯಾಗಿರುವುದು ಗೋಲ್ಡನ್ ಪಾಮ್ಸ್ ಇದು ಮೊದಲೇನಲ್ಲ. ಒಳ್ಳೆಯವರು, ಕೆಟ್ಟವರು ಎಂಬ ಭೇದವನ್ನು ಗೋಲ್ಡನ್ ಪಾಮ್ಸ್ ಎಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ಬಂದ ಅತಿಥಿಗಳಿಗೆ ಒಳ್ಳೆಯ ಗಾಳಿ, ನೀರು, ಊಟ, ವಸತಿ, ಮತ್ತೆ ಬೇಕಿದ್ದ ಎಲ್ಲಾ ಸವಲತ್ತುಗಳನ್ನು ನೀಡುವುದು ಮಾತ್ರ ಅದರ ಕರ್ತವ್ಯ.

ಇಂತಿರುವ ರೆಸಾರ್ಟಿಗೆ, ಅಕ್ಕಿ ಇಲ್ಲ, ಬೇಳೆ ಇಲ್ಲ, ಕರೆಂಟು ಇಲ್ಲ, ಕುಡಿಯಲು ನೀರಿಲ್ಲ ಎಂದು ರಗಳೆ ತೆಗೆಯುವ ಮತದಾನ ಮಾಡಿದ ಜನರಿಂದ ತಪ್ಪಿಸಿಕೊಳ್ಳಲು ಮತ್ತು ಇಲ್ಲಿಯ ಉತ್ತಮವಾಗಿ ಗಾಳಿ ಕುಡಿದು, ಅತ್ಯುತ್ತಮವಾದ ಊಟ ಮಾಡಿ, ಈಜಾಡಿ, ಮಜಾ ಮಾಡಿ, ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲು ಬಂದಿರುವುದಾಗಿ ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಶಾಸಕ ರೇವೂ ನಾಯಕ್ ಬೆಳಮಗಿ ರೆಸಾರ್ಟಿನಲ್ಲಿ ಹೇಳಿದ್ದಾರೆ. ಇರಲಿ, ರೆಸಾರ್ಟಿನಲ್ಲಿರುವ ತಿಳಿನೀರು ಈ ರಾಜಕಾರಣಿಗಳಿಂದ ಚರಂಡಿ ನೀರಿನಂತಾಗದಿದ್ದರೆ ಸಾಕು.

ಬದಲಾವಣೆ ಬಯಸಿ ಶ್ರೀಮಂತ ಜನರು ಇಲ್ಲಿ ಬರುವುದು ಸಹಜ. ತುಮಕೂರು ರಸ್ತೆಯಲ್ಲಿರುವ ನಾಗರೂರಿನಲ್ಲಿ ಸ್ಪಾನಿಷ್ ಸ್ಟೈಲಿನಲ್ಲಿ ಈ ರೆಸಾರ್ಟನ್ನು ನಿರ್ಮಿಸಲಾಗಿದೆ. ಸ್ಪಾ ಜೊತೆಗೆ ಆಯುರ್ವೇದಿಕ್ ಚಿಕಿತ್ಸೆಯನ್ನು ಕೂಡ ಇಲ್ಲಿ ನೀಡಲಾಗುತ್ತದೆ. 150ಕ್ಕೂ ಹೆಚ್ಚು ಐಷಾರಾಮಿ ಹವಾನಿಯಂತ್ರಿತ ರೂಮುಗಳು ಇಲ್ಲಿದ್ದು, ಅತ್ಯಾಧುನಿಕ ಸಲಕರಣೆಗಳನ್ನು ಇದು ಹೊಂದಿದೆ. ಜಂಜಡಗಳನ್ನು ಮರೆತು ಇಲ್ಲಿಗೆ ಬಂದರೆ ಯಾವ ಸುಖಗಳಿಗೂ ಕೊರತೆಯಿಲ್ಲ. 135 ಮೀಟರ್ ಉದ್ದವಿರುವ ಲಾಗೂನ್ ಆಕಾರದ ಸ್ವಿಮಿಂಗ್ ಪೂಲ್ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು.

ಬಾರ್, ಕಾನ್ಫರೆನ್ಸ್ ಹಾಲ್, ಮಕ್ಕಳ ಆಟದ ಮೈದಾನ, ಇಂಟರ್ನೆಟ್, ಲಾಂಡ್ರಿ ಸೌಲಭ್ಯಗಳಿರುವ ಗೋಲ್ಡನ್ ಪಾಮ್ಸ್ ರೆಸಾರ್ಟಿನಲ್ಲಿ 2 ದಿನ ಮತ್ತು 1 ರಾತ್ರಿ ಕಳೆಯಲು ದಂಪತಿಗಳು ನೀಡಬೇಕಾಗಿರುವ ಬೆಲೆ ರು. 13,000 ಮಾತ್ರ. ಡೀಲಕ್ಸ್ ರೂಂ ಬೇಕಿದ್ದರೆ ಇಬ್ಬರಿಗೆ ರು.22,000. ಪ್ರೆಸಿಡೆನ್ಶಿಯಲ್ ಸೂಟ್ ಬೇಕಿದ್ದರೆ ರು. 35,000 ಮಾತ್ರ. ಜೇಬಲ್ಲಿ ದುಡ್ಡಿದ್ದರೆ ಸಾಕು ಸ್ವರ್ಗ ಅಂಗೈಯಲ್ಲಿ. ಹೆಚ್ಚಿನ ವಿವರಗಳು ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+