ಹಿರೇಮಠ್ ಕಡೆಯವರಿಗೆ ಯಡ್ಡಿಯಿಂದ ಬೆದರಿಕೆ?

BS Yeddyurappa
ಹುಬ್ಬಳ್ಳಿ, ಮಾ.18: ಬಿಎಸ್ ಯಡಿಯೂರಪ್ಪ ಬೆಂಬಲಿಗರು ಎದುರಾಳಿಗಳನ್ನು ಸಂಧಾನ ಅಥವಾ ಬೆದರಿಕೆ ಹೇಗಾದರೂ ಮಟ್ಟ ಹಾಕಲು ಯತ್ನಿಸಿದ ಘಟನೆಗಳು ನಡೆದಿದೆಯಾದರೂ ವಿಷಯ ಬಹಿರಂಗಗೊಂಡಿರಲಿಲ್ಲ. ಆದರೆ, ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ವಕೀಲ ಎಸ್ ಆರ್ ಹಿರೇಮಠ್ ಅವರಿಗೆ ಪರೋಕ್ಷವಾಗಿ ಬೆದರಿಕೆ ಒಡ್ಡಿರುವ ಪ್ರಸಂಗ ನಡೆದಿದೆ.

ಕಬ್ಬಿಣದ ಅದಿರು ಕಂಪನಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ಅಕ್ರಮ ಸಂಬಂಧಗಳ ಕಾರಣವೇ ಅಮೂಲ್ಯ ನೈಸರ್ಗಿಕ ಸಂಪತ್ತಿನ ಲೂಟಿಯಾಗುತ್ತಿದೆ. ಇದೆಲ್ಲವೂ ಮತ್ತೆ ಹೊಸ ಜೀವ ಪಡೆಯಬೇಕು ಎಂಬುದು ನಮ್ಮ ಆಶಯ ಎಂದು ಹಿರೇಮಠ್ ಹೇಳಿದ್ದಾರೆ.

ಬಿಎಸ್ ವೈ ಬೆಂಬಲಿಗರಿಂದ ಬೆದರಿಕೆ: ಯಡಿಯೂರಪ್ಪ ಅವರ ಬೆಂಬಲಿಗರು ನನ್ನ ಗೆಳೆಯರಿಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ಆದರೆ, ನನಗೆ ಯಾವುದೇ ಕರೆಗಳು ಬಂದಿಲ್ಲ. ಯಡಿಯೂರಪ್ಪ ಅವರನ್ನು ಭೇಟಿ ಆಗುವಂತೆ ನನ್ನ ಗೆಳೆಯರ ಮೂಲಕ ಕೇಳಿಕೊಂಡಿದ್ದಾರೆ. ನನಗೆ ಇದರಲ್ಲಿ ವೈಯಕ್ತಿಕ ಲಾಭವಿಲ್ಲ. ನಾನು ಯಾರನ್ನು ಭೇಟಿ ಆಗಬೇಕಿಲ್ಲ.

ಅಕ್ರಮ ಗಣಿಗಾರಿಕೆಯಲ್ಲಿ ಗಳಿಸಿದ ಹಣವನ್ನು ವಾಪಾಸ್ ಮಾಡಲಿ, ಶಿಕ್ಷೆ ಅನುಭವಿಸಲಿ ನಂತರ ಮಾತನಾಡಲು ಸಿದ್ಧ. ಇದು ಗಾಲಿ ರೆಡ್ಡಿ ಅವರಿಗೂ ಅನ್ವಯಿಸುತ್ತದೆ ಆದರೆ, ಬೆದರಿಕೆ ಕರೆ ಬಗ್ಗೆ ಪೊಲೀಸರಿಗೆ ದೂರು ನೀಡುವ ಅಗತ್ಯ ಕಂಡು ಬರಲಿಲ್ಲ. ಏನಾದರೂ ಆದರೆ, ನೀವಿದ್ದೀರಲ್ಲ(ಮಾಧ್ಯಮ) ಎಂದು ಹಿರೇಮಠ್ ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು.

ಆಂಧ್ರಪ್ರದೇಶದಲ್ಲಿ ಆರು ಗಣಿ ಕಂಪನಿಗಳನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದು ಇದರಲ್ಲಿ ನಾಲ್ಕು ಕಂಪನಿಗಳು ರೆಡ್ಡಿ ಸೋದರರಿಗೆ ಸೇರಿದ್ದಾಗಿವೆ. ತಾವು ಬಿಜೆಪಿಗೆ 200 ಕೋಟಿ ಮತ್ತು ಯಡಿಯೂರಪ್ಪ ಸರ್ಕಾರಕ್ಕೆ ತಿಂಗಳಿಗೆ 10 ಕೋಟಿ ನೀಡಿದ್ದಾಗಿ ಶ್ರೀರಾಮುಲು ಹೇಳಿದ್ದು ಈ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಹಿರೇಮಠ್ ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+