ಎಲ್‌ಪಿಜಿ ಗ್ರಾಹಕರಿಗೆ ಬಜೆಟ್ಟಲ್ಲಿ ಹೊಸ ಯೋಜನೆ

ಈ ಯೋಜನೆ ಕರ್ನಾಟಕದ ಮೈಸೂರಿನಲ್ಲಿ ಈಗಾಗಲೆ ಜಾರಿಯಲ್ಲಿದೆ ಎಂದು ಹೇಳಿದ ಪ್ರಣಬ್, ಮುಂದಿನ ಆರು ತಿಂಗಳಲ್ಲಿ ಕೆಲ ರಾಜ್ಯಗಳ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ಲೋಕಸಭೆಯಲ್ಲಿ ವಿವರಿಸಿದರು. ರಾಜಸ್ತಾನದ ಅಲ್ವರ್‌ನಲ್ಲಿ ಸೀಮೆಎಣ್ಣೆಯನ್ನು ಇದೇ ಯೋಜನೆಯಲ್ಲಿ ಮಾರಲಾಗುತ್ತಿದೆ.
ಈ ಯೋಜನೆಯ ಪ್ರಕಾರ, ಗ್ರಾಹಕರು ಎಲ್‌ಪಿಜಿ ಸಿಲಿಂಡರನ್ನು ತೈಲ ಕಂಪನಿಗಳು ನಿಗದಿಪಡಿಸಿದ ಮಾರುಕಟ್ಟೆ ದರ ಚುಕ್ತಾ ಮಾಡಿ ಕೊಳ್ಳಬೇಕು. ಗ್ರಾಹಕರ ಆದಾಯದ ಆಧಾರದ ಮೇಲೆ ಅವರಿಗೆ ಸಬ್ಸಿಡಿ ಲಭ್ಯವಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ನಂತರ ಮರುಪಾವತಿಸಬೇಕಾದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಈ ಸ್ಕೀಮ್ ಆಧಾರ ಕಾರ್ಡ್ ಇರುವವರಿಗೆ ಮಾತ್ರ ಲಭ್ಯವಿರುತ್ತದೆ. ಆದರೆ, ಆಧಾರ್ ಚೀಟಿಯ ಆಧಾರದ ಮೇಲೆ ಗ್ರಾಹಕರನ್ನು ಗುರುತಿಸಿ ಅವರಿಗೆ ಹಣ ಮರುಪಾವತಿಸುವ ಈ ಯೋಜನೆಯ ಯಶಸ್ಸಿನ ಬಗ್ಗೆ ಅನೇಕ ಬ್ಯಾಂಕುಗಳು ಅನುಮಾನ ವ್ಯಕ್ತಪಡಿಸಿವೆ.












Click it and Unblock the Notifications