ಆತ್ಮಾಹುತಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಕರುಣಾನಿಧಿ
ಚೆನ್ನೈ,
ಮಾ 16 : ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಮತ್ತು ಮುಖ್ಯಮಂತ್ರಿ ಜಯಲಲಿತಾ ನಡುವಣ ಮಾತಿನ ಚಕಮಕಿ ತಾರಕಕ್ಕೇರಿದೆ. ಅಣ್ಣಾದೊರೈ ಶತಮಾನೋತ್ಸವ ಗ್ರಂಥಾಲಯವನ್ನು ಚೆನ್ನೈ ನಗರದಿಂದ ಸ್ಥಳಾಂತರಿಸಿದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಕರುಣಾನಿಧಿ ಸಿಎಂ ಜಯಲಲಿತಾಗೆ ಬೆದರಿಕೆ ಹಾಕಿದ್ದಾರೆ. id="toptextpromo">ಈ
ಸರಕಾರ ಚೆನ್ನೈ ನಗರದ ಕೊಟ್ಟುಪುರಂನಲ್ಲಿರುವ ಈ ಲೈಬ್ರೆರಿಯನ್ನು ಬೇರೆ ಕಡೆ ಸ್ಥಳಾಂತರಿಸಲು ವ್ಯವಸ್ಥಿತ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಯಂತೆ ಸರಕಾರ ವಿದ್ಯುತ್ ಸಮಸ್ಯೆ ಬಗೆಹರಿಸುವ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದ್ದಾರೆ. ರೈತರ ಮತ್ತು ನೇಕಾರರ ಪಾಲಿಗೆ ಎಐಡಿಎಂಕೆ ಸರಕಾರ ದುಸ್ವಪ್ನವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಣ್ಣಾದೊರೈ
ಶತಮಾನೋತ್ಸವ ಗ್ರಂಥಾಲಯವನ್ನು ಸುಸಜ್ಜಿತ ಆಸ್ಪತ್ರೆಯಾಗಿ ಬದಲಾಯಿಸಲು ಜಯಲಲಿತಾ ಸರಕಾರ ನಿರ್ಧರಿಸಿತ್ತು. ಆದರೆ ಈ ವಿಷಯ ಕೋರ್ಟ್ ಈಗ ಮೆಟ್ಟಲೇರಿದ್ದು ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಎರಡೂ ಪಕ್ಷದ ನಾಯಕರುಗಳು ಮಾತಿನ ಚಕಮಕಿಯಲ್ಲಿ ನಿರತರಾಗಿರುವುದರಿಂದ, ಹಳಸಿ ಹೋಗಿರುವ ಎರಡೂ ಪಕ್ಷದ ಸಂಬಂಧ ಮತ್ತಷ್ಟು ಹದೆಗೆಟ್ಟು ಹೋಗಿದೆ.











Click it and Unblock the Notifications