ದೀದಿ ಕೃಪೆ: ಏರಿದ್ದ ರೈಲು ಪ್ರಯಾಣ ದರ ಇಳಿಕೆ?

thanks-to-mamata-railway-passenger-fares-rollback-soon
ನವದೆಹಲಿ, ಮಾ.15: ಸರಿಯಾಗಿ 10 ವರ್ಷದ ನಂತರ ನಿನ್ನೆಯಷ್ಟೇ ಏರಿಸಲಾಗಿದ್ದ ರೈಲು ಪ್ರಯಾಣ ದರವನ್ನು ವಾಪಸ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಇದರಿಂದ ಪ್ರಯಾಣಿಕರು ಸಧ್ಯಕ್ಕೆ ಖುಷಿಪಡಬಹುದಾದರೂ ದೀರ್ಘಾವಧಿಯಲ್ಲಿ ಇದರಿಂದ ಹೊಡೆತ ಬೀಳುವುದು ನಿಶ್ಚಿತ.

ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರನ್ನು ರೈಲ್ವೆ ಖಾತೆಯಿಂದ ಕೆಳಗಿಳಿಸಿ, ಆತ ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಪ್ರಧಾನಿಗೆ ಖಡಕ್ಕಾಗಿ ಹೇಳಿದ್ದ ಪಶ್ಚಿಮ ಬಂಗಾಳದ ದೀದಿ ಮಮತಾ ಬ್ಯಾನರ್ಜಿ ತಕ್ಷಣಕ್ಕೆ ಒಂದರಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಅರ್ಥಾತ್ ದಿನೇಶ್ ರಾಜೀನಾಮೆ ಒಗಾಯಿಸಿದ್ದಾರೆ.

ಆದರೆ ಹೆಚ್ಚಾಗಿರುವ ರೈಲು ಪ್ರಯಾಣ ದರ ಮೊತ್ತವನ್ನು ಜಾರಿಗೆ ತರುವ ಮುನ್ನವೇ ವಾಪಸ್ ಪಡೆಯುವ ಬಗ್ಗೆ ಕೇಂದ್ರ ಸರಕಾರ ಈಗಲೇ ಏನನ್ನೂ ಹೇಳಿಲ್ಲವಾದರೂ ದಿನೇಶ್ ಏರಿಸಿರುವ ರೈಲು ಪ್ರಯಾಣ ದರವನ್ನು ವಾಪಸ್ ಪಡೆಯುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಅದಕ್ಕಿಂತ ಮುಖ್ಯವಾಗಿ ದೀದಿ ಮಮತಾರ ಎರಡೂ ಬೇಡಿಕೆಗೆ ಪ್ರಧಾನಿ ಸಿಂಗ್ ಅಸ್ತು ಎಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಚೋದ್ಯವೆಂದರೆ ಸಚಿವ ದಿನೇಶ್ ಮಂಡಿಸಿದ್ದ ರೈಲ್ವೆ ಬಜೆಟ್ ಅನ್ನು ಪ್ರಧಾನಿ ಸಿಂಗ್ 'ಪ್ರಗತಿಪರ ಮತ್ತು ಆಧುನಿಕ' ಎಂದು ಬಣ್ಣಿಸಿದ್ದರು. ಕುತೂಹಲದ ಸಂಗತಿಯೆಂದರೆ ಸಚಿವರೊಬ್ಬರು ಮಂಡಿಸಿದ ಬಜೆಟ್ ಬಗ್ಗೆ ಸಂಸತ್ತಿನಲ್ಲಿ ರರ್ಚಿಸುವುದಕ್ಕೂ ಮುನ್ನವೇ ಆ ಸಚಿವರೇ ನಿರ್ಗಮಿಸಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+