ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಸಚಿವ ತ್ರಿವೇದಿ ಇನ್ನೂ ರಾಜೀನಾಮೆ ನೀಡಿಲ್ಲ

By Srinath
|
Google Oneindia Kannada News

railway-budget-fall-out-minister-dinesh-trivedi-resigns
ನವದೆಹಲಿ, ಮಾ.15: ನೀರಸ ಬಜೆಟ್ ಮಂಡಿಸಿದ ಆರೋಪದ ಮೇಲೆ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರನ್ನು ರೈಲ್ವೆ ಖಾತೆಯಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಆ ಸ್ಥಾನಕ್ಕೆ ಪಶ್ಚಿಮ ಬಂಗಾಳದ ದೀದಿ ಮಮತಾ ಬ್ಯಾನರ್ಜಿ ಅವರ ನಂಬಿಗಸ್ಥ ಮುಖುಲ್ ರಾಯ್ ನೇಮಕವಾಗುವ ಸಾಧ್ಯತೆಯಿದೆ.

ಇಂದು ಬೆಳಗ್ಗೆ (ಗುರುವಾರ) ರೈಲ್ವೆ ಸಚಿವ ತ್ರಿವೇದಿ ರಾಜೀನಾಮೆ ನೀಡಿದ್ದಾರೆ ಎಂದು ಬಹುತೇಕ ಎಲ್ಲ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಆದರೆ ಸ್ವತಃ ತ್ರಿವೇದಿಯೇ ತಮ್ಮ ರಾಜೀನಾಮೆಯನ್ನು ಅಲ್ಲಗಳೆದಿದ್ದಾರೆ.

ಮುಖ್ಯವಾಗಿ, ಹತ್ತು ವರ್ಷಗಳಿಂದ ರೈಲು ಪ್ರಯಾಣ ದರವನ್ನು ಏರಿಕೆ ಮಾಡದಿರುವುದನ್ನು ವ್ರತದಂತೆ ಆಚರಿಸಿಕೊಂಡು ಬರಲಾಗಿತ್ತು. ಆದರೆ ನಿನ್ನೆಯ ಬಜೆಟ್ಟಿನಲ್ಲಿ ದಿನೇಶ್ ಏಕಾಏಕಿ ಏರಿಸಿದ್ದರು. ಅದು ತೀರಾ ಹೊರೆಯಾಗುವಂತಿಲ್ಲದಿದ್ದರೂ ಮಮತಾಗೆ ಪ್ರಯಾಣ ದರ ಹೆಚ್ಚಳ ಸುತರಾಂ ಇಷ್ಟವಿರಲಿಲ್ಲ. ಜತೆಗೆ ಮಮತಾ ದೀದಿ ಮುಂದೆ ತ್ರಿವೇದಿ ಆ ಪ್ರಸ್ತಾಪವನ್ನೇ ಇಟ್ಟಿರಲಿಲ್ಲ. ಸೋ, ತನ್ನ ಗಮನಕ್ಕೆ ತಾರದೆಯೇ ಇಂತಹ ದುಸ್ಸಾಹಸ ಕೈಗೊಂಡ ತ್ರಿವೇದಿಯನ್ನು ಪ್ಲಾಟ್ ಫಾರಂನಿಂದ ಮಮತಾ ನಿಖಾಲಿ ಮಾಡಿದ್ದಾರೆ.

ಜತೆಗೆ, ಈ ಹಿಂದಿನ ಬಜೆಟ್ ಗಳಂತೆ ನಿನ್ನೆಯ ಬಜೆಟ್ ಮಹತ್ವಾಕಾಂಕ್ಷಿಯದ್ದೇನೂ ಆಗಿರಲಿಲ್ಲ. ಕಳೆದ ವರ್ಷ ನಾನು ಅತ್ಯುತ್ತಮ ಬಜೆಟ್ ಮಂಡಿಸಿದ್ದೆ. ಅದಕ್ಕೂ ಮುನ್ನಾ ಸಚಿವರು ಉತ್ತಮ ಪರಂಪರೆ ಹಾಕಿದ್ದರು. ಆದರೆ ತ್ರಿವೇದಿ ಇಬ್ಬಗೆಯ ನೀತಿ ಅನುಸರಿಸಿ, ನನಗೇ ಯಾಮಾರಿಸಿದ್ದಾರೆ. ಆದ್ದರಿಂದ ಅವರನ್ನು ಕೆಳಗಿಳಿಸಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಮತಾ ದುಂಬಾಲು ಬಿದ್ದ ಪರಿಣಾಮ ತ್ರಿವೇದಿ ಸಾಹೇಬರು ಮುಖುಲ್ ರಾಯ್ ಗೆ ಟ್ರಾಕ್ ಬಿಟ್ಟುಕೊಟ್ಟಿದ್ದಾರೆ.

English summary
The India Union Railway Minister Dinesh Trivedi who had presented his maiden Rail Budget on Wednesday (Mar 14) has stepped down thanks to Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X