• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾಮಾರಿಸಿದ ಮುನಿಯಪ್ಪ: ಮುನಿದ ಪ್ರಕಾಶ್

By Srinath
|
kolar-gets-rwly-coach-factory-varthur-prakash-unhappy
ಕೋಲಾರ, ಮಾ.15: ಕೊನೆಗೂ ಬರಗೆಟ್ಟ ಕೋಲಾರಕ್ಕೆ ಕೋಚ್ ಫ್ಯಾಕ್ಟರಿ ಬಂತು ಅಂತ ಸಂಭ್ರಮಿಸುವಂಥದ್ದೇನಿಲ್ಲ. ಎಂದಿನಂತೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಬೋಗಿ ಭೋಂಗಿ ಬಿಟ್ಟಿದ್ದಾರಷ್ಟೇ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಖಾತೆ ಸಚಿವ ಆರ್. ವರ್ತೂರು ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿನ್ನೆ ಪ್ರಕಟವಾದ ಕೇಂದ್ರ ರೈಲ್ವೆ ಬಜೆಟ್ ಕೋಲಾರ ಜಿಲ್ಲೆಯ ಜನರ ಪಾಲಿಗೆ ಸಂಪೂರ್ಣ ನಿರಾಸೆಯನ್ನುಂಟು ಮಾಡಿದ್ದು, ಇದೊಂದು ಜನರನ್ನು ಯಾಮಾರಿಸುವ ಬಜೆಟ್ ಎಂದು ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ರೈಲ್ವೆ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವ್ಯಾಗನ್ ತಯಾರಿಕಾ ಘಟಕ ಮಂಜೂರಾಗಿದೆ ಎಂದು ವ್ಯಾಪಕ ಪ್ರಚಾರ ಗಿಟ್ಟಿಸಿದ್ದ ಕೇಂದ್ರ ರೈಲ್ವೆ ಸಚಿವರು, ಈ ಬಾರಿ ಕೋಲಾರಕ್ಕೆ ಕೋಚ್ ಕಾರ್ಖಾನೆಯನ್ನು ಮಂಜೂರು ಮಾಡಿಸುವ ನಾಟಕವನ್ನಾಡಿದ್ದಾರೆ. ಅದೂ ರಾಜ್ಯ ಸರಕಾರ ಸಹಕಾರ ನೀಡಿದರೆ ಮಾತ್ರ ಎಂಬ ಷರತ್ತು ಇಟ್ಟಿರುವುದು ರೈಲ್ವೆ ಸಚಿವರಿಗೆ ಕೋಲಾರ ಜಿಲ್ಲೆಯ ಜನರ ಮೇಲಿರುವ ಪ್ರೀತಿಯನ್ನು ಬಹಿರಂಗಪಡಿಸಿದೆ ಎಂದರು.

ಬಹಳ ಕಾಲದಿಂದ ಸಂಸತ್ತಿನಲ್ಲಿ ಕೋಲಾರವನ್ನು ಪ್ರತಿನಿಧಿಸುತ್ತಿರುವ ಕೆ.ಎಚ್. ಮುನಿಯಪ್ಪ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಹೊಸ ರೈಲ್ವೆ ಯೋಜನೆಗಳನ್ನು ಮಂಜೂರು ಮಾಡಿಸದೆ ಹಳೆಯ ಯೋಜನೆಗಳನ್ನೇ ಹೊಸ ರೂಪದಲ್ಲಿ ಜನರ ಮುಂದಿಟ್ಟಿದೆ ಎಂದರು.

ಕೋಲಾರ ಚಿಕ್ಕಬಳ್ಳಾಪುರ ನಡುವಿನ ಬ್ರಾಡ್‌ಗೇಜ್ ಪರಿವರ್ತನಾ ಯೋಜನೆ ಯನ್ನು ಬಜೆಟ್‌ನಲ್ಲಿ ಪುನರುಚ್ಚರಿಸುವ ಮೂಲಕ ಕೇಂದ್ರ ರೈಲ್ವೆ ಬಜೆಟ್ ಹಳೆಯ ಮದ್ಯ ಹೊಸ ಬಾಟಲಿನಲ್ಲಿ ನೀಡಿದಂತಾಗಿದೆ ಎಂದು ತಿಳಿಸಿದರು. ಜಿಲ್ಲಾ ಕೇಂದ್ರವನ್ನು ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯ ಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೊಸ ರೈಲುಗಳ ಓಡಾಟಕ್ಕೆ ಬಜೆಟ್ ಅವಕಾಶ ನೀಡಿಲ್ಲ.

ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯುವ ತರಕಾರಿ, ಹಣ್ಣು, ಮಾವನ್ನು ಹೊರ ರಾಜ್ಯಗಳಿಗೆ ಕಳುಹಿಸುವ ವಿಶೇಷ ಗೂಡ್ಸ್ ರೈಲುಗಳ ಪ್ರಸ್ತಾಪ ಇಲ್ಲದಂತಾಗಿದೆ. ಕೋಲಾರ ಬೆಂಗಳೂರು ನಡುವೆ ಯಾವಾಗ ರೈಲು ಓಡಿಸಲಾಗುವುದು ಎಂಬ ಬಗ್ಗೆಯೂ ಬಜೆಟ್‌ನಲ್ಲಿ ಚಕಾರವಿಲ್ಲ. ರೈಲ್ವೆ ಬಜೆಟ್ ಕೋಲಾರ ಮತ್ತು ಚಿಕ್ಕಬಳ್ಳಾ ಪುರ ಜಿಲ್ಲೆಯ ರೈತರಿಗೆ ನೆರವಾಗಿಲ್ಲ. ಇದೊಂದು ಕಣ್ಣೊರೆಸುವ ಬಜೆಟ್ ಆಗಿದೆಯೆಂದು ಸಚಿವ ವರ್ತೂರು ವ್ಯಂಗ್ಯವಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ರೈಲ್ವೆ ಬಜೆಟ್ ಸುದ್ದಿಗಳುView All

English summary
The Union Railway Minister Dinesh Trivedi presented his maiden Rail Budget on Wednesday (Mar 14). Dinesh Trivedi had announced setting up of a railway coach factory in Kolar, Karnataka. But Kolar District Incharge Minister Varthur Prakash is unhappy about it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more