ರೈಲಲ್ಲಿ ಕಳ್ಳತನ ಮಾಡುತ್ತಿದ್ದ ಬೆಂಗಳೂರು ಬಾಲಕ ಸೆರೆ

Bangalore boy arrested for theft in railway in Andhra Pradesh
ಹೈದರಾಬಾದ್, ಮಾ. 14 : ಶಾಲೆ ಮತ್ತು ಊರು ಬಿಟ್ಟು ರೈಲಿನಲ್ಲಿ ಕಳ್ಳತನದಲ್ಲಿ ತೊಡಗಿದ್ದ ಬೆಂಗಳೂರಿನ 14 ವರ್ಷದ ಬಾಲಕನನ್ನು, ಕೇಂದ್ರ ರೈಲ್ವೆ ಬಜೆಟ್ ಮಂಡನೆಯಾಗುವ ಹಿಂದಿನ ದಿನ, ರೈಲ್ವೆ ಪೊಲೀಸರು ಆಂಧ್ರಪ್ರದೇಶದ ಖಮ್ಮಂನಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನ ಕೆವಿಪಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಕೆಲ ತಿಂಗಳ ಹಿಂದೆ ಮನೆಬಿಟ್ಟು ಆಂಧ್ರಪ್ರದೇಶ ಸೇರಿದ್ದ ಮತ್ತು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ. ಪ್ಯಾಸೆಂಜರ್ ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದಾಗ ಖಮ್ಮೇ ರೈಲು ನಿಲ್ದಾಣದಲ್ಲಿ ಬಾಲಕನನ್ನು ಬಂಧಿಸಲಾಗಿದೆ.

ಆತನ ಪಾಲಕರಿಗೆ ಈ ವಿಷಯ ತಿಳಿಸಲಾಗಿದ್ದು, ಬಾಲಾಪರಾಧಿ ಮಂಡಳಿಯ ಮುಂದೆ ಆತನನ್ನು ಹಾಜರುಪಡಿಸಲಾಗುವುದು ಎಂದು ಸರಕಾರಿ ರೈಲ್ವೆ ಪೊಲೀಸ್ ಸುಪರಿಂಟೆಂಡೆಂಟ್ ಆಗಿರುವ ಎಮ್ ಕಾಂತ ರಾವ್ ಅವರು ತಿಳಿಸಿದ್ದಾರೆ.

ಪ್ರಸ್ತುತ ರೈಲ್ವೆ ಬಜೆಟ್ ಮಂಡಿಸುತ್ತಿರುವ ಸಚಿವ ದಿನೇಶ್ ತ್ರಿವೇದಿ ಅವರು, ರೈಲುಗಳಲ್ಲಿ ಕಳ್ಳತನಗಳಾಗದಂತೆ, ಸಾಮಾನು ಸರಂಜಾಮುಗಳು ಸುರಕ್ಷಿತವಾಗುವಂತೆ ಏನು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ? ರೈಲ್ವೆ ಇಲಾಖೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಮಾತಾಡುತ್ತಿರುವ ತ್ರಿವೇದಿ ಅವರು ಪ್ರಯಾಣಿಕರ ಸುರಕ್ಷತೆಯತ್ತ ಹೆಚ್ಚಿನ ಗಮನ ನೀಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+