ದೇವೇಗೌಡರಿಗೆ ರಾಷ್ಟ್ರಪತಿ ಪಟ್ಟ ನೀಡಲು ಆಗ್ರಹ

ರೈತನ ಮಗನಾಗಿ ಜನಿಸಿದ ದೇವೇಗೌಡರು ಕಳೆದ 50 ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ. ದೇಶದ ಹಿರಿಯ ಮತ್ತು ಅಪರೂಪದ ನಾಯಕ ದೇವೇಗೌಡರಿಗೆ ರಾಷ್ಟ್ರಾಧ್ಯಕ್ಷ ಸ್ಥಾನ ನೀಡಿ ಗೌರವಿಸಬೇಕಿದೆ ಎಂದು ಸಂಘಟನೆಗಳು ಹೇಳಿದೆ.
ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆ ವೇಳೆ ದೇವೇಗೌಡರ ಹೆಸರನ್ನು ಸೂಚಿಸುವಂತೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಒಕ್ಕಲಿಗರ ವೇದಿಕೆ ಒತ್ತಾಯಿಸಿದೆ.
ದೇವೇಗೌಡರು ರಾಷ್ಟ್ರಪತಿಗಳಾದರೆ ಕನ್ನಡಿಗರಿಗೆ ಹೆಮ್ಮೆ. ಇದು ನಾಡಿನ ಜನತೆ ಅಪೇಕ್ಷೆ ಕೂಡಾ ಆಗಿದೆ ಎಂದು ಒಕ್ಕಲಿಗರ ಜಾಗೃತಿ ವೇದಿಕೆಯ ರಂಗೇಗೌಡ ಹಾಗೂ ಕುವೆಂಪು ನಗರ ಒಕ್ಕಲಿಗರ ವೇದಿಕೆ ಅಧ್ಯಕ್ಷ ಕೆಸಿ ಗಂಗಾಧರ್ ಅವರು ಆಗ್ರಹಿಸಿದ್ದಾರೆ.












Click it and Unblock the Notifications