ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ, ಇಂಗ್ಲೀಷ್ ಬರದ ಹೆಡ್ಡನಾಗಿದ್ದೇ ತಪ್ಪಾ?: ಯಡ್ಡಿ

By Mahesh
|
Google Oneindia Kannada News

BS Yeddyurappa and Ananthkumar
ಬೆಂಗಳೂರು, ಮಾ.13: 'ನನಗೆ ಹಿಂದಿ, ಇಂಗ್ಲೀಷ್ ಬರುವುದಿಲ್ಲ. ಇವೆರಡೂ ಗೊತ್ತಿರುವವರಿಗೆ ಹೈಕಮಾಂಡ್ ಆದ್ಯತೆ ನೀಡುತ್ತದೆ. ಇದು ನಮಗೆ ಬೇಕಾಗಿಲ್ಲ. ಮೊದಲು ನಮ್ಮತನವನ್ನು ಉಳಿಸಿಕೊಳ್ಳಬೇಕು' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪ್ರಾದೇಶಿಕ ಅಸಮತೋಲನ, ಭಾಷೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೊಬ್ಬೆ ಹೊಡೆಯುವ ಹೋರಾಟಗಾರರು ಯಡಿಯೂರಪ್ಪ ಅವರಿಗೆ ಸೂಕ್ತ ಪಟ್ಟ ಸಿಗದಿರುವುದಕ್ಕೆ ಭಾಷಾ ಸಮಸ್ಯೆಯೂ ಕಾರಣ ಇರಬಹುದು ಎಂಬ ಕಲ್ಪನೆ ಬಹುಶಃ ಬಂದಿರಲಾರದು.

ನ್ಯಾಯಾಲಯವೇ ನನ್ನನ್ನು ನಿರ್ದೋಷಿ ಎಂದು ತೀರ್ಪು ನೀಡಿದ್ದರೂ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಪಕ್ಷದಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ಅಧಿಕಾರಕ್ಕಿಂತ ಸ್ವಾಭಿಮಾನವೇ ಮುಖ್ಯ. ಅದನ್ನು ಬಲಿ ಕೊಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಯಡಿಯೂರಪ್ಪ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ನಂತರ ದಿಢೀರ್ ದೆಹಲಿಗೆ ತೆರಳಿದ ಯಡಿಯೂರಪ್ಪ ಅಲ್ಲಿ ಏನು ನಡೆಸಿದರು ಎಂಬುದು ಮುಂದೆ ತಿಳಿಯುತ್ತದೆ.

ಇದೇ ಕಾರಣಕ್ಕೆ ನಾನು ರಾಷ್ಟ್ರೀಯ ರಾಜಕಾರಣಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ಹಿಂದಿ, ಇಂಗ್ಲೀಷ್ ಚೆನ್ನಾಗಿ ಬಲ್ಲ ಬೇರೆ ಅವರಿಗೆ(ಅನಂತ್ ಕುಮಾರ್) ಅವರಿಗೆ ಉತ್ತಮ ಸ್ಥಾನ ಸಿಗುತ್ತಿದೆ.

ಸಾಮೂಹಿಕ ನಾಯಕತ್ವ ಅನ್ನೋ ಕಲ್ಪನೆಯೇ ಸರಿಯಿಲ್ಲ. ನಾಯಕ ಎಂದಿದ್ದರೂ ಒಬ್ಬನೇ ಅದು ಇಲ್ಲಾಗಲಿ ಅಥವಾ ಅಲ್ಲಾಗಲಿ ಎಂದ ಯಡಿಯೂರಪ್ಪ ಚುನಾವಣೆ ಫಲಿತಾಂಶ ಹೊರಬಂದ ಮೇಲೆ ಸದಾನಂದ ಗೌಡ, ಈಶ್ವರಪ್ಪ ಅವರಿಗೆ ಜ್ಞಾನೋದಯವಾಗಲಿದೆ ಎಂದು ಹೇಳಿದರು.

English summary
Why BJP highcommand always prefers MP Ananthkumar and DV Sadananda Gowda over BS Yeddyurappa. Is Yeddyurappa is ignored due to linguistic problem? Yeddyurappa openly said he has minimum knowledge on Hindi and English language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X