ಬೆಂಗಳೂರು ಸಿಬಿಐಗೆ ರೆಡ್ಡಿ ಮೇಲೆ ಕಂಟ್ರೋಲ್ ಇರಲಿ

illegal-mining-bangalore-cbi-take-control-of-reddy
ಬೆಂಗಳೂರು, ಮಾ.13: ಇನ್ನೂ ನಾಲ್ಕು ದಿನ ಸಿಬಿಐ ವಶವಾಗುತ್ತಿದ್ದಂತೆ ರೆಡ್ಡಿ ಜನಾರ್ದನ ರೆಡ್ಡಿ ಮಾಡಿದ್ದಾರೂ ಏನು? ಪರಪ್ಪನ ಅಗ್ರಹಾರ ಜೈಲುವಾಸಿಯಾಗಿ ನೆಂಟರಿಷ್ಟರ ಜತೆ ದಿನಾ ಕಾಲ ಕಳೆಯಬಹುದು ಎಂಬ ಎಣಿಕೆಯಲ್ಲಿದ್ದ ರೆಡ್ಡಿಗೆ ಸಹಜವಾಗಿಯೇ ನಿರಾಶೆಯಾಗಿದೆ.

ಅದನ್ನು ಅವರು ಹೊರಹಾಕಿದ್ದು ಹೀಗೆ .... ಪೊಲೀಸ್ ವಾಹನದಲ್ಲಿ ವಾಪಸು ಬರುವಾಗ... ಜೈಲು ಆವರಣದಲ್ಲಿ.... ರೆಡ್ಡಿ ತಮ್ಮ ಬಲಗೈಯಲ್ಲಿ ಮಾಧ್ಯಮಗಳ ಮೈಕನ್ನು ಬರಸೆಳೆದು, ಆತುರಾತುರವಾಗಿ ಮಾತನಾಡತೊಡಗಿದರು. ಹೆಚ್ಚು ಮಾತನಾಡುವ ಉಮೇದಿಯಲ್ಲಿದ್ದ ರೆಡ್ಡಿ ಸುಮ್ಮನೆ ಹಾಗೇ ಚಾಲಕನ ಕತ್ತಿನ ಮೇಲೆ ತಮ್ಮ ಎಡಗೈಯನ್ನು ಇಟ್ಟರು. ಅಂದರೆ 'ಸ್ವಲ್ಪ ಸ್ಪೀಡ್ ತಗ್ಗಿಸು. ಮಾಧ್ಯಮಗಳ ಜತೆ ಇನ್ನಷ್ಟು ಮಾತನಾಡಬೇಕಿದೆ' ಎಂದು ಚಾಲಕನಿಗೆ ಹೇಳುವಂತಿತ್ತು ರೆಡ್ಡಿಯ ಹಾವ-ಭಾವ.

ಆದರೆ ಸಿಬಿಐ ಖಂಡಿತಾ ಇದನ್ನು ನಿರೀಕ್ಷಿಸಿರಲಿಲ್ಲ. ಮಧ್ಯಾಹ್ನದ ಮಂಪರಿನಲ್ಲಿದ್ದ ಅಧಿಕಾರಿ ಬೆಚ್ಚಿಬಿದ್ದು, ರೆಡ್ಡಿಯನ್ನು ವಾಹನದೊಳಕ್ಕೆ ಸೆಳೆದುಕೊಳ್ಳಲು ಯತ್ನಿಸಿದರು. ಜತೆಗೆ ಮಾಧ್ಯಮಗಳನ್ನು ತಪ್ಪಿಸಲು ವಾಹನವನ್ನು ಸ್ಪೀಡಾಗಿ ಓಡಿಸುವಂತೆ ಚಾಲಕನಿಗೆ ಅಬ್ಬರಿಸಿ ಹೇಳಿದರು.

ಇದೆಲ್ಲ ಓಕೆ. ಸಿಬಿಐ ರಕ್ಷಣಾ ಕೋಟೆಯಲ್ಲಿರುವ ರೆಡ್ಡಿಗೆ ಏನಾದರೂ ಹೆಚ್ಚು ಕಮ್ಮಿಯಾಗಿದ್ದರೆ ಗತಿಯೇನು? ರೆಡ್ಡಿ ಬೇರೇನಾದರೂ ಆಟವಾಡಿದ್ದರೆ ಕಥೆಯೇನು? ಅಥವಾ ರೆಡ್ಡಿಗೇ ಏನಾದರೂ ಆಗಿದ್ದಿದ್ದರೆ... ಇದಕ್ಕೇನಾ ರೆಡ್ಡಿ ಬೆಂಗಳೂರಿನಲ್ಲಿ ಕಾಲಿಡುತ್ತಿದ್ದಂತೆ ಇಲ್ಲಿನ ಪೊಲೀಸರು ಅಂದ್ರೆ ನನಗೆ ತುಂಬಾ ಇಷ್ಟ ಅಂದಿದ್ದು. Dear Bangalore CBI, take control of Mr. Reddy.

ಈ ಮಧ್ಯೆ, ನಾಲ್ಕು ದಿನಗಳೊಳಗಾಗಿ ರೆಡ್ಡಿಯ ವಿಚಾರಣೆ ಪೂರ್ಣಗೊಳಿಸುವಂತೆ ಸಿಬಿಐಗೆ ಕೋರ್ಟ್ ತಾಕೀತು ಮಾಡಿದೆ. ಅಂದರೆ ಮಾರ್ಚ್‌ 16ರ ನಂತರ ರೆಡ್ಡಿಗೆ ಪರಪ್ಪನ ಅಗ್ರಹಾರ ಜೈಲೇ ಗತಿ. ಸದ್ಯಕ್ಕೆ ರೆಡ್ಡಿಗೆ ಬೇಕಿರುವುದೂ ಅದೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+