ಅಹಿಂದ ನಾಮಬಲದಲ್ಲಿ ಶ್ರೀರಾಮುಲು ಏಳಿಗೆ

Sriramulu
ತುಮಕೂರು, ಮಾ.12: ಹಿಂದುಳಿದವರ ನಾಮಬಲದಿಂದ ಆರ್ ಎಲ್ ಜಾಲಪ್ಪ ಮತ್ತು ಸಿದ್ದರಾಮಯ್ಯ ಅಧಿಕಾರ ಪಡೆದು ಎಲ್ಲಾ ಸುಖ ಅನುಭವಿಸಿದರು. ಈಗ ಶ್ರೀರಾಮುಲು ಅವರು ಕೂಡಾ ಅದೇ ಹಾದಿ ಹಿಡಿದಿದ್ದಾರೆ. ಅವರು ಏನು ಮಾಡುತ್ತಾರೆ ನೋಡೋಣ..ಆದಿಮ ಮುಖ್ಯಸ್ಥ ಹಾಗು ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿಗಳ ಸಬಲೀಕರಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಹಿಂದ ಚಳವಳಿ ಸ್ಥಿತಿಗತಿ ಹದಗೆಟ್ಟಿದೆ. ಜೊತೆಗೆ ದಲಿತ ಚಳವಳಿಯೂ ಸಹ ಹಾದಿ ತಪ್ಪಿದೆ.

ಸ್ವಾತಂತ್ರಾನಂತರವೂ ಅಲೆಮಾರಿ ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಕುಡಿಯುವ ನೀರು, ಸೂರು, ಶಿಕ್ಷಣ ಯಾವುದು ದೊರೆತಿಲ್ಲ ಎಂದು ವಿಷಾದಿಸಿದರು.

ಗೃಹ ಕೈಗಾರಿಕೆಗಳು ನಾಶಗೊಂಡಿವೆ. ಪೊರಕೆಗಳ ಮಾರುಕಟ್ಟೆ ಕೇವಲ ಎಂಟು ಕುಟುಂಬಗಳ ಕೈಯಲ್ಲಿದೆ. ಇದರಿಂದ ಅಲೆಮಾರಿಗಳ ಬದುಕುವ ಎಲ್ಲಾ ದಾರಿಗಳು ಮುಚ್ಚಿ ಹೋಗಿವೆ. ಕುಲ ಕಸುಬುಗಳಿಂದ ಆದಾಯ ಸಿಗುತ್ತಿಲ್ಲ. ಅವಮಾನ ಆಗುತ್ತಿದೆ ಎಂಬ ಆಲೋಚನೆಗೆ ಪರ್ಯಾಯವಾಗಿ ಯೋಚಿಸಬೇಕು. ಅದನ್ನು ಲಾಭದ ಮಾರುಕಟ್ಟೆಯನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರಾಮಯ್ಯ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+