ಸಿಬಿಐ ಮುಂದೆ ಅಕ್ಷರಶಃ ಕಣ್ಣೀರಿಟ್ಟ ಜನಾರ್ದನ ರೆಡ್ಡಿ

ಶುಕ್ರವಾರ (ಮಾ 9) ಬೆಳಗ್ಗೆ ಅಧಿಕಾರಿಗಳ ತಂದ ವಿಚಾರಣೆ ಆರಂಭಿಸುತ್ತಿದ್ದಂತೆ ರೆಡ್ಡಿ ಕಣ್ಣಲ್ಲಿ ನೀರು ತುಂಬಿ ಬಂದಿದೆ. ಪತ್ನಿಗೆ ನೀಡಿರುವ ನೋಟೀಸ್ ವಿಚಾರ ಪ್ರಸ್ತಾಪಿಸಿ ಮೂವತ್ತು ನಿಮಿಷ ತಮ್ಮ ಅಹವಾಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಎಎಂಸಿ ಮತ್ತು ಡೆಕ್ಕನ್ ಮೈನಿಂಗ್ ಕಂಪೆನಿ ನಡೆಸಿರುವ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ರೆಡ್ಡಿ ಪತ್ನಿಗೂ ನೋಟೀಸ್ ನೀಡಿರುವುದರಿಂದ ನೊಂದಿರುವ ರೆಡ್ಡಿ "ವಿಚಾರಣೆಗೆ ಕರೆತಂದರೆ ಆಕೆಗೆ ಮಾನಸಿಕ ಹಿಂಸೆ ಆಗುತ್ತದೆ, ನನ್ನನ್ನು ಬೇಕಾದರೆ ಇನ್ನೂ 15 ದಿನ ನಿಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡು ಮಾಹಿತಿ ಪಡೆಯಿರಿ. ಆಕೆಯನ್ನು ಮಾತ್ರ ಕರೆಸಬೇಡಿ' ಎಂದು ಗೋಳಿಟ್ಟಿದ್ದಾರೆ.
ರೆಡ್ಡಿ ಮತ್ತು ಅವರ ಆಪ್ತ ಖಾನ್ ಸಿಬಿಐ ಕಸ್ಟಡಿ ಅವಧಿ ಮಾರ್ಚ್ 12ಕ್ಕೆ ಮುಕ್ತಾಯ ಗೊಳ್ಳಲಿದೆ. ಮತ್ತೆ ಹತ್ತು ದಿನ ಕಸ್ಟಡಿಗೆ ಕೇಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications