ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಶಿಷ್ಟ ವರ್ಗದ ಮಠಾಧೀಶರಿಂದ ಸದಾನಂದ ಗೌಡ ಭೇಟಿ

By Prasad
|
Google Oneindia Kannada News

Backward class seers meet Sadananda Gowda
ಬೆಂಗಳೂರು, ಮಾ. 10 : ಮಾರ್ಚ್ 21ರಂದು 2012-13ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದುಳಿದ ಮತ್ತು ಪರಿಶಿಷ್ಟ ವರ್ಗದ ಮಠಾಧಿಪತಿಗಳು ಕಾಗಿನೆಲೆ ಪೀಠದ ನಿರಂಜನಪುರಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಅಧಿಕೃತ ಕಚೇರಿ 'ಕೃಷ್ಣಾ'ದಲ್ಲಿ ಶನಿವಾರ ಭೇಟಿ ಮಾಡಿದರು.

ಬೋವಿ, ಕುರುಬ, ಈಡಿಗ ಸಮುದಾಯಕ್ಕೆ ಸೇರಿದ ಸುಮಾರು 20ಕ್ಕೂ ಹೆಚ್ಚು ಕಾವಿಧಾರಿ ಸ್ವಾಮೀಜಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಜೆಟ್‌ನಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಕ್ಕೆ ಖಂಡಿತ ಹೆಚ್ಚಿನ ಅನುದಾನವನ್ನು ಬಜೆಟ್ಟಲ್ಲಿ ದೊರಕಿಸಿಕೊಡುವುದಾಗಿ ಗೌಡರು ಭರವಸೆ ನೀಡಿರುವುದಾಗಿ, ಭೇಟಿಯ ನಂತರ ನಿರಂಜನ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದರು. ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯ ಮತಎಣಿಕೆಯ ದಿನವೇ ಸದಾನಂದ ಗೌಡರು ತಮ್ಮ ಪ್ರಥಮ ಬಜೆಟ್ ಮಂಡಿಸಲಿದ್ದಾರೆ.

English summary
More than 20 seers belonging to backward class met Chief Minister of Karnataka DV Sadananda Gowda in Bangalore and demanded extra grants to the backward people in Karnataka budget 2012-13, which will be tabled on March 21. Kaginele seer Niranjan swamiji headed the delegation of swamijis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X