ವಿಷ್ಣುನ ಮೆಟ್ರೋ ಹಳಿಗೆ ನೂಕಿದ್ದು ಪ್ರೇಮವೈಫಲ್ಯ, ಛೆ!

namma-metro-jayanagar-vishnu-suicide-love-failure
ಬೆಂಗಳೂರು, ಮಾ.7: 'ಸೋಮವಾರ ರಾತ್ರಿ ಮೆಟ್ರೋ ರೈಲಿಗೆ ಸಿಕ್ಕಿ ಸತ್ತನಲ್ಲ ನಮ್ಮ ಜಯನಗರದ ವಿಷ್ಣು ಶರಣ್‌, ಅವ ಹಾಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಪ್ರೇಮ ವೈಫಲ್ಯ' ಅಂತ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್. ಬದರಿನಾಥ್ ಹೇಳುತ್ತಿದ್ದರೆ ಸ್ವತಃ ವಿಷ್ಣುವಿನ ತಾಯಿಗೇ (ಪಕ್ಕದ ಚಿತ್ರದಲ್ಲಿ) ಅದನ್ನು ನಂಬುವ ಸ್ಥಿತಿಯಲ್ಲಿಲ್ಲ.

ಏನ್ಮಾಡೋಣ ಈ ಹಾಳು ಹದಿಹರಯಾನೇ ಹಾಗೆ. ಅವನೆಷ್ಟೇ ಪ್ರತಿಭಾವಂತನಾಗರಲಿ. ಅಪ್ಪ-ಅಮ್ಮನ ಆರೈಕೆ, ಆಪ್ಯಾಯತೆಯಲ್ಲಿ ಬೆಳೆದಿರಲಿ. ಪ್ರೇಮ ಎಂಬ ಮಾರಿ ಅಡ್ಡ ಬಂದರೆ ಬದುಕು ಮಟಾಷ್! ಇಲ್ಲಿ ವಿಷ್ಣು ಕೇಸಿನಲ್ಲೂ ಅದೇ ಆಗಿದ್ದು.

ಈ ಹದಿನೇಳರ ವಿಷ್ಣು ಶರಣ ಸಹ ಹೀಗೇ ಪ್ರೇಮಕ್ಕೆ ಶರಣು ಎಂದಿದ್ದಾನೆ. ಓದಿನಲ್ಲಿ ವಿಷ್ಣು ನಿಜಕ್ಕೂ ತುಂಬಾ ಬುದ್ಧಿವಂತ. ಬಹುತೇಕ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ಗಣಿತದಲ್ಲಿ ಇವ ನೂರಕ್ಕೆ ನೂರು ತೆಗೆದುಕೊಂಡಿದ್ದ. ಆದರೆ ಬದುಕಿನ ಲೆಕ್ಕಾಚಾರದಲ್ಲಿ ಫೇಲ್ ಆದ. ಸೆಂಟ್ ಜೋಸಫ್ಸ್ ಬಾಯ್ಸ್ ಹೈಸ್ಕೂಲಿನ ಅರಿವುಗೇಡಿ ವಿಷ್ಣು ಹೋದವರ್ಷವಷ್ಟೇ ICSE ಪರೀಕ್ಷೆಯಲ್ಲಿ ಶೇ. 97 ಅಂಕ ತೆಗೆದುಕೊಂಡು ಸೈ ಎನ್ನಿಸಿಕೊಂಡಿದ್ದ. ಆದರೆ

'ಇಂಥ ಪ್ರೀತಿ-ಪ್ರೇಮ' ಸಾಯೋದ್ ಯಾವಾಗ?: ಕಳೆದ ನಾಲ್ಕು ತಿಂಗಳಿಂದ ಹುಡುಗಿಯೊಬ್ಬಳ ಪ್ರೇಮ ಪಾಶದಲ್ಲಿ ಸಿಲುಕಿದ್ದ. ಆದರೆ ಅದು ಏಕಮುಖವಾಗಿತ್ತೋ ಏನೋ... ಆದರೆ ಅಬೋಧ ಪ್ರಾಣವೊಂದು ಇನ್ನಿಲ್ಲವಾಗಿದೆ. ಸಾಯುವುದಕ್ಕೆ ಮುಕ್ಕಾಲು ಗಂಟೆ ಮೊದಲು ಅಮ್ಮ 'ಎಲ್ಲಿದ್ದೀಯೋ ಮಗನೆ, ರಾತ್ರಿ ಇಷ್ಟೊತ್ತಾದರೂ ಮನೆಗೆ ಬರಲಿಲ್ವಾ' ಅಂತ 'ನಿರ್ಮಲ' ಮನಸ್ಸಿನಿಂದ ಕೇಳಿದ್ದಾರೆ. ಆದರೆ ಅವ ಅದಾಗಲೇ 'ಆ ಮನೆಗೆ' ತೆರಳಲು ನಿರ್ಧರಿಸಿದ್ದವಾ 'ಅಮ್ಮಾ ಬಂದೆ, ಇನ್ನರ್ಧ ಗಂಟೆ' ಅಂತ ಹೇಳಿ ಹೆಚ್ಚು ಮಾತನಾಡುವ ವ್ಯವಧಾನವಿಲ್ಲದೆ ಕಚಕ್ ಅಂತ ಮೊಬೈಲ್ ಡಿಸ್ ಕನೆಕ್ಸ್ ಮಾಡಿದ್ದಾನೆ.

ಆದಾದ ಮರುಗಳಿಗೆಯೇ... ಅರೆ ಅಮ್ಮನಿಗೆ ವಾಪಸ್ ಬರ್ತೀನಿ ಅಂತ ಮಾತು ಕೊಟ್ಟೆನಲ್ಲ ಅಂತಲೂ ಯೋಚಿಸದೇ ಸೀದಾ ತನ್ನ 'ಆ ಗೆಳತಿ'ಗೆ SMS ಮಾಡಿ 'ಓಕೆ. ಬೈ. ನಾನು ಸಾಯ್ತಿದ್ದೀನಿ. ಸಾರಿ ಕಣೇ' ಅಂತ ಹೇಳಿದ್ದಾನೆ. ಅಷ್ಟೆ ಮುಂದಿನದು ಓವರ್ ಟು ಮೆಟ್ರೋ ರೈಲು ಹಳಿ ಮುಂದೆ ಜಯನಗರದ ವಿದ್ಯಾರ್ಥಿಯೊಬ್ಬನ ಆತಹತ್ಯೆ ಎಂಬ ಸುದ್ದಿ ... ನಿರ್ಮಲ- ಸತ್ಯನಾರಾಯಣ ದಂಪತಿಗೆ ಪುತ್ರಶೋಕ ನಿರಂತರ... 'ಇಂಥ ಪ್ರೇಮ' ಸಾಯುವುದು ಯಾವಾಗ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+