ಯಡಿಯೂರಪ್ಪ ಮತ್ತೆ ಸಿಎಂ ಆಗ್ತಾರೆ: ಈಶ್ವರಪ್ಪ

BS Yeddyurappa and
ಚಿಕ್ಕಮಗಳೂರು, ಮಾ.7: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಸೇರಿದಂತೆ ಯಡಿಯೂರಪ್ಪ ಅವರ ಮೇಲಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಲಿದೆ. ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಪ್ರಚಾರ ನಿರತರಾಗಿರುವ ವಿಪಕ್ಷಗಳು ಅನಗತ್ಯವಾಗಿ ಯಡಿಯೂರಪ್ಪ ಅವರ ಮೇಲೆ ಕಳಂಕ ಹೊರೆಸಿ ಆಕ್ಷೇಪಿಸುತ್ತಿದ್ದಾರೆ.

ಇದು ನಮ್ಮಲ್ಲಿ ಮಾತ್ರ ಸಾಧ್ಯ: ಯಡಿಯೂರಪ್ಪ ಅವರ ಆರೋಪಗಳು ಕೇಳಿ ಬಂದ ತಕ್ಷಣ, ಹೈಕಮಾಂಡ್ ಅವರ ರಾಜೀನಾಮೆ ಕೇಳಿತು. ಅದಕ್ಕೆ ಒಪ್ಪಿ ಕೂಡಲೇ ರಾಜೀನಾಮೆ ನೀಡಿ ಯಡಿಯೂರಪ್ಪ ಅವರು ಸಜ್ಜನಿಕೆ ಮೆರೆದರು. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ.

ಎಸ್ ಎಂ ಕೃಷ್ಣ, ಎಚ್ ಡಿ ಕುಮಾರಸ್ವಾಮಿ ಅವರ ಮೇಲೂ ಆರೋಪಗಳಿದೆ. ಗಣಿ ಅಕ್ರಮ ಕುರಿತ ವರದಿಯಲ್ಲೂ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಅವರು ಕೂಡಾ ರಾಜೀನಾಮೆ ಕೊಡಲಿ. ನಂತರ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲಿ ಎಂದು ಈಶ್ವರಪ್ಪ ಸವಾಲೆಸೆದರು.

ಉ-ಚಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಖಚಿತ. ಯಡಿಯೂರಪ್ಪ ಕ್ಲೀನ್ ಚಿಟ್ ಸಿಕ್ಕಿರುವುದು ನಮ್ಮ ಮತಯಾಚನೆ ಕಾರ್ಯಕ್ಕೆ ಹೆಚ್ಚಿನ ಹುರುಪು ನೀಡಿದೆ ಎಂದು ಈಶ್ವರಪ್ಪ ಖುಷಿಯಿಂದ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+