ಛೇ! ರಾಹುಲ್ ಜೊತೆ ಹೋಲಿಸೋದೇ :ಅಖಿಲೇಶ್

Posted By:
Subscribe to Oneindia Kannada
Akilesh
ಲಖ್ನೋ, ಮಾ.6: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಕೈಲಿ ಹಿಡಿದು ರಾಹುಲ್ ಗಾಂಧಿ ಜೊತೆ ಸಮಾಜವಾದಿ ಪಕ್ಷದ ಯುವ ನೇತಾರ ಅಖಿಲೇಶ್ ಯಾದವ್ ಅವರನ್ನು ಬಹುತೇಕ ಎಲ್ಲಾ ಮಾಧ್ಯಮಗಳು ಹೋಲಿಕೆ ಮಾಡಿದೆ. ಆದರೆ, ರಾಹುಲ್ ಒಬ್ಬ ಡೈನಾಮಿಕ್ ಲೀಡರ್ ಆತನೊಡನೆ ನನ್ನ ಹೋಲಿಕೆ ಯಾಕೆ ಎಂದು ಆಖಿಲೇಶ್ ನಮ್ರವಾಗಿ ಹೇಳಿದ್ದಾರೆ.

ಜನತೆ ಬದಲಾವಣೆಯನ್ನು ಬಯಸಿದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕಾನೂನು ಸುವ್ಯವಸ್ಥೆ, ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕೀಯ ಪುಢಾರಿಗಳನ್ನು ಮಟ್ಟ ಹಾಕುವುದು ನಮ್ಮ ಗುರಿ ಎಂದು ಅಖಿಲೇಶ್ ಹೇಳಿದ್ದಾರೆ.

ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾದ 40 ಅಸೆಂಬ್ಲಿ ಸೀಟುಗಳ ಭವಿಷ್ಯ ನಿರ್ಧಾರವಾಗಲಿದೆ.

ಮುಲಾಯಂ ಸಿಂಗ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಣಲು ಪಕ್ಷ ಬಯಸಿದೆ. ಐದು ವರ್ಷ ಉತ್ತಮ ಆಡಳಿತ ನೀಡುವ ಭರವಸೆ ಇದೆ. ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆ, ಮಾಯಾವತಿ ಅವರ ದುರಾಳಿಡಳಿಯ ಕೊನೆಗೊಳ್ಳಲಿದೆ ಎಂದು ಅಖಿಲೇಶ್ ಹೇಳಿದ್ದಾರೆ. [ಅಖಿಲೇಶ್ ಯಾರು, ರಾಹುಲ್ ಸಮಕ್ಕೆ ಹೇಗೆ ಬೆಳೆದ ಲೇಖನ ನಿರೀಕ್ಷಿಸಿ..]

ಅಖಿಲೇಶ್ ನಿರೀಕ್ಷೆ, ಸಮೀಕ್ಷೆ ಫಲಿತಾಂಶ ಎರಡೂ ನಿಜವಾಗುವ ಲಕ್ಷಣಗಳು ಕಂಡು ಬಂದಿದೆ. ಕಾಂಗ್ರೆಸ್ ರಾಯ್ ಬರೇಲಿ, ಅಮೇಥಿಯಲ್ಲದೆ ಬಹುತೇಕ ಕಡೆ ಹಿನ್ನೆಡೆ ಅನುಭವಿಸಿದೆ. ಸದ್ಯದ ಚುನಾವಣಾ ಫಲಿತಾಂಶ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the exit polls predicted the victory of Samajwadi Party in Uttar Pradesh, Akhilesh Yadav said that he never compared himself with Congress' dynamic leader, Rahul Gandhi. SP is leading in 187 compared to Congress 57 on March.6 counting 11.20 AM.
Please Wait while comments are loading...