ಮಣಿಪುರದಲ್ಲಿ ಕಾಂಗ್ರೆಸ್ ಭರ್ಜರಿ ಷೋ

ಸಮಯ 12.50: ಉಳಿದಂತೆ MPP, CPI,NCP ಇನ್ನೂ ಖಾತೆ ತೆರೆದಿಲ್ಲ. ಮಣಿಪುರದಲ್ಲಿ ಪಕ್ಷೇತರರ ಬೆಂಬದೊಂದಿಗೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಾತ್ರಿಯಾಗಿದೆ.
12.00: ಉತ್ತರಾಖಂಡ್ ನ 70 ಸೀಟುಗಳಲ್ಲಿ ಬಿಜೆಪಿ 26ರಲ್ಲಿ ಮುನ್ನಡೆಯಲ್ಲಿದ್ದು ಈಗಾಗಲೇ 3 ಸೀಟುಗಳನ್ನು ಗೆದ್ದಿದೆ. ಪಂಜಾಬ್ ನ 117 ಸೀಟುಗಳಲ್ಲಿ 57 ರಲ್ಲಿ ಮುನ್ನಡೆ ಸಾಧಿಸಿದ್ದು, 5 ಸೀಟುಗಳನ್ನು ಗೆದ್ದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಮುನ್ನಡೆಯಲ್ಲಿರುವ ಎಸ್ ಪಿ ಜೊತೆ ಯಾರು ಕೈ ಜೋಡಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ಸಮಯ 11.30: ಎಸ್ ಪಿ ಮುನ್ನಡೆಯಲ್ಲಿದ್ದರೂ, ಅಧಿಕಾರಕ್ಕೆ ಬಂದರೂ ನಾವು ಅವರ ಜೊತೆ ಕೈ ಜೋಡಿಸುವುದಿಲ್ಲ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಜೊತೆಗೆ ಪಂಜಾಬ್, ಉತ್ತರಾಖಂಡ್ ಸ್ಥಿತಿ ಗತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಸಮಯ 9.53: ಕಾಂಗ್ರೆಸ್ ಅಧಿಪತ್ಯದ ರಾಯ್ ಬರೇಲಿ, ಅಮೇಥಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತೀವ್ರ ಹಿನ್ನೆಡೆ ಅನುಭವಿಸಿದೆ. ಆರಂಭ ಮುನ್ನಡೆ ಪಡೆದಿದ್ದ ಸಮಾಜವಾದಿ ಪಕ್ಷದ ಸೈಕಲ್ ತನ್ನ ನಾಗಲೋಟ ಮುಂದುವರೆಸಿದೆ. ಬಿಜೆಪಿ ಅಚ್ಚರಿ ರೀತಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದು, ಅಡಳಿತಾರೂಢ ಬಹುಜನ ಸಮಾಜವಾದಿ ಪಕ್ಷ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.
ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಆರಂಭಿಕ ಮುನ್ನಡೆ ಪಡೆದಿದೆ. 8.30ರ ಸುಮಾರಿಗೆ 10 ಸೀಟುಗಳಲ್ಲಿ 6 ರಲ್ಲಿ ಎಸ್ ಪಿ ಮುನ್ನಡೆ ಗಳಿಸಿತ್ತು. ಬಿಎಸ್ ಪಿ 3 ಸೀಟು ಹಾಗೂ ಕಾಂಗ್ರೆಸ್ 1 ಸೀಟುಗಳಲ್ಲಿ ಮುನ್ನಡೆ ಪಡೆದಿದೆ.[ಪೂರ್ಣ ವಿವರಕ್ಕೆ ಕ್ಲಿಕ್ ಮಾಡಿ]
ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾದ 40 ಅಸೆಂಬ್ಲಿ ಸೀಟುಗಳ ಭವಿಷ್ಯ ನಿರ್ಧಾರವಾಗಲಿದೆ.
ಸಿಎನ್ ಎನ್ ಐಬಿಎನ್ ಸಮೀಕ್ಷೆ: ಸಮಾಜವಾದಿ ಪಕ್ಷ 232 ರಿಂದ 250 ಸೀಟುಗಳನ್ನು ಗೆಲ್ಲಲಿದೆ ಎಂದು ಸಿಎನ್ ಎನ್ ಐಬಿಎನ್-ದ ವೀಕ್-ಸಿಎಸ್ ಡಿಎಸ್ ಭವಿಷ್ಯ ನುಡಿದಿದೆ. ಬಿಎಸ್ ಪಿಗೆ 65 ರಿಂದ 70 ಸಿಗುವ ನಿರೀಕ್ಷೆಯಿದೆ.












Click it and Unblock the Notifications