ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲ ರಾಜ್ಯ ಗೋವಾದಲ್ಲಿ ಮತ್ತೊಮ್ಮೆ ಕೇಸರಿ ಅಲೆ

By Mahesh
|
Google Oneindia Kannada News

EX CM Manohar Parikkar
ಪಣಜಿ, ಮಾ.6: ಕರಾವಳಿ ರಾಜ್ಯ ಗೋವಾ ಕಡಲಲ್ಲಿ ಮತ್ತೊಮ್ಮೆ ಕೇಸರಿ ಅಲೆ ಎದ್ದಿದೆ. ಗೋವಾ ಅಸೆಂಬ್ಲಿ ಚುನಾವಣೆ ಫಲಿತಾಂಶ ಕಾಂಗ್ರೆಸ್ ಗೆ ಸಹಿಸಲಾರದ ಸಂಕಟ ತಂದಿದೆ.

40 ಸೀಟುಗಳ ಗೋವಾ ಅಸೆಂಬ್ಲಿಯಲ್ಲಿ ನಿಚ್ಚಳ ಬಹುಮತ ಪಡೆಯಲು ಬೇಕಿದ್ದ 21 ಸೀಟುಗಳನ್ನು ದಾಟಿದ ಬಿಜೆಪಿ 23 ಸೀಟುಗಳನ್ನು ಗೆದ್ದಿದ್ದು, 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ. ಕೇವಲ 9 ಕ್ಷೇತ್ರದಲ್ಲಿ ಗೆಲುವು ಕಂಡ ಕಾಂಗ್ರೆಸ್ ಸಂಪೂರ್ಣ ಶರಣಾಗಿದೆ. ಪಕ್ಷೇತರರು 7 ಸೀಟುಗಳನ್ನು ಗೆದ್ದಿದ್ದಾರೆ.

ಗೋವಾ ಕಾಂಗ್ರೆಸ್ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಕುಟುಂಬ ರಾಜಕಾರಣವೇ ಕಾಂಗ್ರೆಸ್ ಹಿನ್ನೆಡೆಗೆ ಕಾರಣಾಗಿದೆ ಎಂಬುದು ತುಂಬಾ ತಡವಾಗಿ ಕಾಂಗ್ರೆಸ್ ನಾಯಕರಿಗೆ ಅರಿವಾಗಿದೆ.

ಶೇ.33ಕ್ಕೂ ಅಧಿಕ ಟಿಕೆಟ್ ಗಳು ಹಾಲಿ ಶಾಸಕರ ಕುಟುಂಬ ವರ್ಗದಲ್ಲೇ ಹಂಚಿಕೆಯಾಗಿತ್ತು. ಕಾಂಗ್ರೆಸ್ ನಾಯಕರು ಈಗ ವಿಧಿ ಇಲ್ಲದೆ ಸೋಲು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾ 40

ಪಣಜಿಯಲ್ಲಿ ಉತ್ತಮ ಆಂತರದಿಂದ ಜಯಭೇರಿ ಬಾರಿಸಿದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕಾರ್ ಮತ್ತೊಮ್ಮೆ ಸಿಎಂ ಪಟ್ಟ ಗಳಿಸುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ನ ರಾಜಕೀಯ ಅಸ್ಥಿರತೆಯಿಂದ ಬೇಸತ್ತ ಜನ ಕೈಲಿ ಕೇಸರಿ ಬಾವುಟ ಹಿಡಿದಿದ್ದಾರೆ.

English summary
Goa Assembly election 2012 results: The Congress has been routed in beach state of Goa as well. With early indications that the BJP is going to sweep in the state, the Congress representatives in Goa has started on their blame game and has slammed the party's decision to allot 33% of seats to the kin of sitting legislators as the reason for the party's stunning defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X