ವಕೀಲರಿಂದ ಹಲ್ಲೆ: ರೆಡ್ಡಿ ಬೆಂಬಲಿಗರ ಕುಮ್ಮಕ್ಕು
ಬೆಂಗಳೂರು,ಮಾ.5:
ಕಳೆದ ವಾರ ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ನಡೆಸಿದ ಗೂಂಡಾಗಿರಿ ಹಿಂದೆ ಆಂಧ್ರದ ವಕೀಲರು ಇರುವ ಶಂಕೆಯಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿದ್ದಕ್ಕೆ ಪುಷ್ಠಿ ನೀಡುವಂತಹ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇದನ್ನು ವಕೀಲರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಈ ವಿಷಯ ಬಹಿರಂಗ ಪಡಿಸಿದ್ದಾರೆ. id="toptextpromo">ಮಾಜಿ
ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ನಡೆದ ಗಲಭೆಯ ಹಿಂದೆ ಹೊರಗಿನಿಂದ ಬಂದ ವ್ಯಕ್ತಿಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಳ್ಳಾರಿಯಿಂದ ಬಂದಿದ್ದ ಕೆಲವರು ವಕೀಲರಂತೆ ವೇಷ ಧರಿಸಿಕೊಂಡು ನ್ಯಾಯಾಲಯಕ್ಕೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಗುರುವಾರ
ವಕೀಲರ ಸಂಘದ ಮಳಿಗೆಗಳಲ್ಲಿ 200ಕ್ಕೂ ಹೆಚ್ಚು ಕಪ್ಪು ಕೋಟ್‌ಗಳು ಮಾರಾಟವಾಗಿವೆ. ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಕಪ್ಪು ಕೋಟ್ ಧರಿಸಿ ನ್ಯಾಯಾಲಯಕ್ಕೆ ಬಂದಿರುವ ಬಗ್ಗೆ ಫೋಟೋ ಮತ್ತು ವಿಡಿಯೊ ತುಣುಕುಗಳು ಇವೆ. ಮಾಧ್ಯಮಗಳ ಮೇಲಿನ ದಾಳಿಯ ಹಿಂದೆ ಅವರ ಕೈವಾಡ ಇರುವ ಸಾಧ್ಯತೆ ಇದೆ. ಅಂತಹ ವ್ಯಕ್ತಿಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ' ಎಂದು ಅವರು ತಿಳಿಸಿದ್ದಾರೆ.











Click it and Unblock the Notifications