ಶಿರಗುಪ್ಪ ಬಿಜೆಪಿ ಶಾಸಕನ ಮೇಲೆ ಎಫ್ ಐಆರ್

Posted By:
Subscribe to Oneindia Kannada
FIR against BJP MLA Somalingappa
ಬೆಂಗಳೂರು,ಮಾ.5: ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಶಿರಗುಪ್ಪ ಬಿಜೆಪಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಸೋಮವಾರ(ಮಾ.5)ರಂದು ಎಫ್ ಐಆರ್ ದಾಖಲಿಸಿದ್ದಾರೆ.

ಲೋಕಾಯುಕ್ತ ವಿಶೇಷ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ನೀಡಿದ ನಿರ್ದೇಶನದ ಮೇರೆಗೆ ಭ್ರಷ್ಟಾಚಾರ ಕಾಯ್ದೆ 13(ಇ) ಐಪಿಸಿ ಸೆಕ್ಷನ್ 120 (ಬಿ) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಶಾಸಕ ಸೋಮಲಿಂಗಪ್ಪ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಶಿರಗುಪ್ಪದ ನಿವಾಸಿ ಉಪನ್ಯಾಸಕ ಬಿ.ಈರಣ್ಣ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದಾಖಲಿಸಿದ್ದರು. ಲೋಕಾಯುಕ್ತ ಅಧೀಕ್ಷಕರು ಮಾ.12ರೊಳಗೆ ತನಿಖೆ ನಡೆಸಿ ವರದಿಯನ್ನು ಕೋರ್ಟ್ ಗೆ ಸಲ್ಲಿಸಬೇಕಿದೆ.

2004 ಮತ್ತು 2008ರ ಚುನಾವಣೆಯಲ್ಲಿ ಶಿರಗುಪ್ಪ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಯಾದ ಶ್ರೀರಾಮುಲು ಬಂಟ ಬಿಜೆಪಿ ಶಾಸಕ ಸೋಮಲಿಂಗಪ್ಪ ಅವರು ಆಸ್ತಿ ವಿವರ ಸಂಪೂರ್ಣವಾಗಿ ಬಹಿರಂಗವಾಗಿರಲಿಲ್ಲ. ಸೋಮಲಿಂಗಪ್ಪ ಮಾಡಿದ ಆಸ್ತಿ ಎಷ್ಟು..? ಓದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Lokayukta Police on Monday(Mar.5) filed a FIR against Siraguppa BJP MLA M.S. Somalingappa for allegedly possessing assets disproportionate to his known sources of income. Judge NK Sudhindra Rao directed the SP Lokayukta to submit his report by March 12.
Please Wait while comments are loading...