ಬಿಹಾರದಲ್ಲಿ ಅತಿ ದೊಡ್ಡ ಹಿಂದೂ ದೇಗುಲ ನಿರ್ಮಾಣ

ಟ್ರಸ್ಟ್ ನ ಕಾರ್ಯದರ್ಶಿ ಕಿಶೊ ಕುನಾಲ್ ಮಾತನಾಡಿ, ಐದು ಅಂತಸ್ತಿನ ಬೃಹತ್ ದೇಗುಲ ನಿರ್ಮಾಣಕ್ಕೆ ಸುಮಾರು 100 ಕೋಟಿ ವೆಚ್ಚವಾಗಲಿದೆ. 222 ಅಡಿ ಎತ್ತರದ ದೇಗುಲ ಸುಮಾರು 15 ಎಕರೆ ವಿಸ್ತೀರ್ಣ ಭೂಮಿಯಲ್ಲಿ ತಲೆ ಎತ್ತಲಿದೆ.
ಹಜಿಪುರ್-ಬಿದುಪುರ್ ರಸ್ತೆಯ ಬಳಿಯ ಇಸ್ಮಾಯಿಲ್ ಪುರ ಗ್ರಾಮದಲ್ಲಿ ಈ ದೇಗುಲ ನಿರ್ಮಾಣವಾಗುತ್ತಿದೆ. ದೇಗುಲ ಇರುವ ಪ್ರದೇಶವನ್ನು ಅಂಗ್ಕೋರ್ ನಗರ ಎಂದು ಪುನರ್ ನಾಮಕರಣ ಮಾಡಲಾಗಿದೆ.
ವಿರಾಟ್ ಅಂಗ್ಕೋರ್ ವಾಟ್ ರಾಮ್ ಮಂದೀರ ಎಂಬ ಹೆಸರಿನ ದೇಗುಲ ಸಮುಚ್ಚಯದಲ್ಲಿ ರಾಧ ಕೃಷ್ಣ, ಸೂರ್ಯ, ವಿಷ್ಣು, ಶಿವ ಪಾರ್ವತಿ, ಗಣೇಶ ಜೊತೆ ವಿಷ್ಣುವಿನ ದಶಾವತಾರ ಪ್ರತಿಮೆಗಳನ್ನು ಕಾಣಬಹುದಾಗಿದೆ.
ಸ್ಥಳೀಯರು ಸುಮಾರು 30 ಕೋಟಿ ವೆಚ್ಚದ ಜಮೀನಿನನ್ನು ದೇಗುಲದ ಟ್ರಸ್ಟ್ ಗೆ ದಾನವಾಗಿ ನೀಡಿರುವುದು ನಮಗೆ ಹೆಚ್ಚಿನ ಹುರುಪು ನೀಡಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಕುನಾಲ್ ಹೇಳಿದ್ದಾರೆ.












Click it and Unblock the Notifications