ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ವೀಸಾ ರದ್ದು ಮಾಡಿ : ಸಿಖ್ಖರು

By Mahesh
|
Google Oneindia Kannada News

Sonia Gandhi
ನ್ಯೂಯಾರ್ಕ್, ಮಾ.4: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ಅಮೆರಿಕಕ್ಕೆ ಆಗಮಿಸಿದ್ದಾರೆ. ಆದರೆ, ಈ ಬಾರಿ ಸೋನಿಯಾಜಿಗೆ ಸ್ಥಳೀಯ ಸಿಖ್ಖರಿಂದ ಒಳ್ಳೆ ಸ್ವಾಗತ ಸಿಕ್ಕಿಲ್ಲ. ಸೋನಿಯಾ ಅವರಿಗೆ ಅವರಿಗೆ ಅಮೆರಿಕದಲ್ಲಿರಲು ಅವಕಾಶ ನೀಡಕೂಡದೆಂದು ಸಿಖ್ಖ್ ಸಮುದಾಯ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ರನ್ನು ಭೇಟಿಯಾಗಿ ಒತ್ತಾಯಿಸಿದೆ.

2002ರ ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸುವುದಾದರೆ, ಸೋನಿಯಾ ಗಾಂಧಿ ಅವರಿಗೂ ವೀಸಾ ನಿರಾಕರಿಸಬೇಕು. ಸಿಖ್ ಸಮುದಾಯದ ಹತ್ಯಾಕಾಂಡ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿಗೂ ವೀಸಾ ನಿಯಮಗಳು ಅನ್ವಯವಾಗಬೇಕು ಎಂದು ಸಿಖ್ ಸಮುದಾಯ ಒತ್ತಾಯಿಸಿದೆ.

ಅಲ್ಲದೆ, ಸೋನಿಯಾ ಗಾಂಧಿ ಅಮೆರಿಕಕ್ಕೆ ಆಗಮಿಸಿರುವುದು ಮತ್ತು ಚಿಕಿತ್ಸೆ ಪಡೆಯುತ್ತಿರುವುದು ವಲಸೆ ಹಾಗೂ ರಾಷ್ಟ್ರೀಯತೆ ಕಾಯ್ದೆ 212(ಎ)(3)(ಇ)(11) ಹಾಗೂ (111) ಮತ್ತು 1998ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕಾಯ್ದೆಯ 604ನೆ ವಿಧಿಯನ್ವಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಿಲರಿ ಕ್ಲಿಂಟನ್‌ರಿಗೆ 'ಸಿಖ್ ಫಾರ್ ಜಸ್ಟಿಸ್‌' (ಎಸ್‌ಎಫ್‌ಜೆ) ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

ಈ ಕಾನೂನಿನನ್ವಯ ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಅಮೆರಿಕ ಪ್ರವೇಶಿಸುವುದನ್ನು ನಿರ್ಬಂಧಿಸುತ್ತದೆ. ಮಾತ್ರವಲ್ಲದೆ, ಕಿರುಕುಳ ಅಥವಾ ನ್ಯಾಯಾಂಗ ಹತ್ಯೆಯಲ್ಲಿ ಶಾಮೀಲಾ ಗಿರುವ ವ್ಯಕ್ತಿಗಳಿಗೂ ಈ ಕಾನೂನು ಪ್ರವೇಶ ನಿಷೇಧ ಹೇರಿದೆ ಎಂದು ಎಸ್‌ಜೆಎಫ್ ಕಾನೂನು ಸಲಹೆಗಾರ ಗುರ್‌ಪಟ್ವಂತ್ ಸಿಂಗ್ ಮನವಿಯಲ್ಲಿ ತಿಳಿಸಿದ್ದಾರೆ.

English summary
A US-based human rights group,the rights group Sikhs for Justice has sent a memo to Clinton on grounds that Sonia Gandhi's entry and presence in the US was in violation of section 212(a)(3)(E)(ii) & (iii) of the Immigration and Nationality Act and section 604 of the International Religious Freedom Act
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X