ಬಿಜೆಪಿಗೆ 260 ಕೋಟಿ ಫಂಡ್ ನೀಡಿದ್ದೆವು: ರಾಮುಲು
ಗದಗ,
ಮಾ.4: ಕೊನೆಗೂ ಕಹಿಸತ್ಯ ಅಧಿಕೃತವಾಗಿ ಹೊರಬಿದ್ದಿದೆ. ಆಪರೇಶನ್ ಕಮಲಕ್ಕೆ ಕಾರಣೀಭೂತರಾಗಿದ್ದ ಬಳ್ಳಾರಿ ಸೋದರರು ಬಿಜೆಪಿಗೆ ಬರೋಬ್ಬರಿ 260 ಕೋಟಿ ರು. ಪಾರ್ಟಿ ಫಂಡ್ ನೀಡಿದ್ದಾಗಿ ಹೇಳಿದ್ದಾರೆ. ಬಳ್ಳಾರಿಯ ಸ್ವತಂತ್ರ ಶಾಸಕ, ಬಿ. ಶ್ರೀರಾಮುಲು ಈ ಸ್ಫೋಟಕ ಮಾಹಿತಿಯನ್ನು ಶನಿವಾರ ತಿಳಿಸಿದ್ದಾರೆ. id="toptextpromo">ಗದಗದಲ್ಲಿ
ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳಲು ಅಣಿಯಾಗುತ್ತಿರುವ ರಾಮುಲು, ಇಲ್ಲಿನ ತೋಂಟದಾರ್ಯ ಮಠದಲ್ಲಿ ಡಾ. ಸಿದ್ದಲಿಂಗ ಸ್ವಾಮೀಜಿ ಜತೆ ಮಾತನಾಡಿದ ಬಳಿಕ ಸುದ್ದಿಗಾರರಿಗೆ ಈ ಸ್ಫೋಟಕ ಮಾಹಿತಿ ಒದಗಿಸಿದರು. id='are-slot-1' class='oiad oi-axt oiadv'> id='top-searched-articles'>'ಕುಮಾರಸ್ವಾಮಿ
2007ರಲ್ಲಿ ಅಧಿಕಾರ ಹಸ್ತಾಂತರ ಮಾಡದಿದ್ದಾಗ ಕಣ್ಣಿರು ಹಾಕುತ್ತಿದ್ದ ಯಡಿಯೂರಪ್ಪ ನಮ್ಮಿಂದ ಧನ ಸಹಾಯ ಕೋರಿದರು. ಪಕ್ಷ ಕಟ್ಟಲು ಪ್ರತಿ ತಿಂಗಳು 10 ಕೋಟಿ ರು. ನಂತೆ 6 ತಿಂಗಳು ಪಕ್ಷಕ್ಕೆ ಧನ ಸಹಾಯ ಮಾಡಿದೆವು. ಇನ್ನು, 2008ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು 200 ಕೋಟಿ ರು. ಬೇಕು ಎಂದು ಯಡಿಯೂರಪ್ಪ ಬೇಡಿದಾಗ ಅಷ್ಟೂ ಮೊತ್ತದ ಇಡಿಗಂಟನ್ನು ನೀಡಿದೆವು' ಎಂದು ರಾಮುಲು ಬಿಡಿಸಿ ಹೇಳಿದರು.











Click it and Unblock the Notifications